ಮಿಂಚುಹುಳ

ನಾ ಕಂಡ ನನಸುಗಳಲ್ಲೊಂದು: ನಾ ಕಂಡ ನನಸ್ಸುಗಳಲ್ಲದೊಂದು ಮಿಂಚುಹುಳ,

ಮಲೆನಾಡಲ್ಲಿ ಸರ್ವೇಸಾಮಾನ್ಯವಾದ ಮಿಂಚುಗಳದ್ದೊಂದು ಪಾತ್ರ, ನಿಶಾಚಿರಿಗಳವು, ರಾತ್ರಿಯ ವೇಳೆ ಜಾಗರಣೆಯ ಹೂಡಿ ದೀಪವ ಹಿಡಿದು ಅಲ್ಲಲ್ಲಿ ಅದೇನನೋ ಜಾಲಾಡಿ ಹುಡುಕಹೊರಟಂತ ಭಾವ ಮೂಡುವುದು ಖಂಡಿತಾ, ಅಮವಾಸ್ಯೆಗೆ ಸಮೀಪಿಸುತ್ತಿದ್ದಂತೆ ಇವುಗಳ ಲಗ್ಗೆ,

ನಾನಂದು ದಿನ ಕಾಲೇಜು ದಿನಗಳಲ್ಲಿ ಮಿಕ್ಕಿದ ಅವಧಿಯಲ್ಲಿ ಗ್ಯಾರೇಜು ಕೆಲಸಕ್ಕೆ ಹೋಗಿ ಮನೆಗೆ ಹೊರಡುವಷ್ಟರಲ್ಲಿ ಗಂಟೆ ಎಂಟಾಗಿರುತ್ತಿತ್ತು, ಅಂದು ನನ್ನ ಬಳಿ ಬೈಸಿಕಲ್ಲು ಕೂಡಾ ಇರಲಿಲ್ಲ, 

ಬಸ್ಸಂತು ನಮ್ಮೂರಿಗೆ ಇರಲಿಲ್ಲ, ಎರಡೂವರೆ ಮೈಲಿ ನಡೆಯಬೇಕಿತ್ತು, ಕೈಯ್ಯಲ್ಲಿ ಸಣ್ಣದದೊಂದು ಜಂಗಮಗಂಟೆ ಕಾಲ್ಬೆಳಕಿಗೆ ಸಾಕಾಗುತ್ತಿತ್ತು, ರಸ್ತೆ ಯಾವುದು, ಚರಂಡಿ ಯಾವುದು ಮಟ್ಟು-ಉಡಿ(ಪೊದೆ) ಯಾವುದೆಂದು ತಿಳಿಯದಂತಹ ಕದ್ದಿಂಗಳ ರಾತ್ರಿ,

ಆ ದಿನ ಎಲ್ಲೆಲ್ಲೋ ಓಲಾಡಿಕೊಂಡು ಸಾಗಬೇಕಾದರೆ, ಕಾಲುಮೈಲು ಅನತಿ ದೂರದಲ್ಲಿ ರಸ್ತೆಯ ಇಕ್ಕೆಲಗಳಲ್ಲೂ ದೀಪಗಳಂತೆ ರಾರಾಜಿಸುತ್ತ ಹೊಳೀತಿದ್ದುದನ್ನು ಕಂಡೆ , ಹತ್ತಿರ ಸಮೀಪಿಸಿದಾಗಲೆ ತಿಳಿದಿದ್ದವು ಮಿಂಚುಹುಳಗಳೆಂದು, ಖುಷೀ ಅಗ್ಹೋತು, ಯಾಕಂದ್ರೆ, ಈಗ ಹಾದಿ ಎಲ್ಲಿದೆ ಅಂತ ತಿಳಿಯುತ್ತಿತ್ತು, ಅವುಗಳು ಸುರಕ್ಷಾ ಇಷಾರೆಗಳಂತೆ ಇಕ್ಕೆಲಗಳ ಬದಿಯಲ್ಲೂ ಇದ್ದವು ಹಂಗಾಗೀ, ಮನೆವರೆಗು ಯಾವ ತ್ರಾಸಿಲ್ಲದೆ ನಡೆದೆ,

ಮಲಗಿದ್ದ ಒಂದಿನ ರಾತ್ರಿ ಗಂಟೆ ಹನ್ನೆರಡರ ಹತ್ತತ್ರ,ಯಾಕೋ ಕಣ್ಬಿಡ್ತೀನಿ ಇಡೀ ಶಯನಾಗೃಹ ಬೆಳ್ಕೇ ಬೆಳ್ಕು , ಎಂತದಪ್ಪ ಅಂತ ದಿಟ್ಟಿಸಿ ಕಣ್ಬಿಟ್ಟೆ, ತಪ್ಪಿಸಿಕೊಂಡು ಕಿಟಕಿ ಕಂಡಿಯಲ್ಲಿ ನುಸುಳಿಕೊಂಡ ಮಿಂಚುಹುಳ, ದಿಕ್ಕೆಟ್ಟು ನಾಲ್ಕು ಮೂಲೆ ಗೋಡೆಗೂ ಮುಂಡ್ರಾಯ್ತಾ (ಡಿಕ್ಕಿ ಹೊಡೆದುಕೊಂಡು) ಬಳಲಿಕೊಂಡಂತೆ ಕಾಣಿಸಿತು, ನಾನಂದೇ ಅಲೋ ಮರಯ ಹೆಣ್ಣು ಹುಡುಕ್ತಾ ಬಂದಿಯಲಾ, ನಮ್ಮನೇಲಿ ಹೆಣ್ಣಿಲ್ಲೋ ಮರಯ , ಬೇಕಾರೆ ಅಂಗಳದಲ್ಲಿ ಹುಡುಕ್ಕೋ ಅಂತ, ಹಾರಿ ಬಿದ್ದು ಹಿಡ್ದೆ, ಅದಕ್ಕೊಂತರ ನಾಚ್ಕಿ ಆಗಿ, ದೀಪದ ಪ್ರಭಾವವನ್ನ ಕಡಿಮೆ ಮಾಡಿಕೊಂಡು, ಆತ್ ಮರ್ರೆ ಒಂಚೂರು ಅಂಗಳಕ್ಕೆ ದಾರಿ ತೋರಿಸಿ ಅಂದಂತೆ ಅನ್ನಿಸಿತು, ಕಿಟಕಿಯ ಚೂರು ಓರೆ ಮಾಡಿ ಹೊರಗೆ ಹಾರಿಬಿಟ್ಟೆ, ಸತ್ನೋ ಕೆಟ್ನೋ ಅಂತ ಧಮ್ ಕಟ್ಟಿ ರಭಸದಿ ಹಾರಿತು , ಈಗದರ ಬೆಳಕಿನ ಪ್ರಭಾವ ಹೆಚ್ಚಿತ್ತು, ತನ್ನ ಅಂಬರ ತಾರೆಯ ಹುಡುಕಲು ತನ್ನದೇ ಪ್ರಭಾವಳಿಯ ಪಸರಿಸಿಕೊಂಡು ಪಿಳ್ಳೆಮರದಡಿ ಮರೆಯಾಯಿತು, ನಾನೋಡಿಲ್ಲಂದಿದ್ರೆ ನಮ್ಮನೆ ಸಲಗದ(ಜೇಡದ) ಹುಳುವಿನ ಬಲೆಯೊಳ ಸೇರಿ, ಇನ್ನೊಂದಿಷ್ಟು ಬಲೆಹೆಣೆಗೆ ದೇಣಿಯಾಗುತಿತ್ತಲ್ಲವೆಂದು , ನನ್ನದೇ ಕನಸಿನ ಹೊದಿಕೆಯ ಹೊದ್ದು ಮಲಗಿದೆ…ಜೀರುಂಡೆಯ ನಿನಾದದಲಿ.

#ಮಿಂಚುಹುಳ #glowworm #minchuhula #malenaadu#glowworm_in_my_life #partofmalnad#ಮಲೆನಾಡ_ಅವಿಭಾಜ್ಯ_ಅಂಗಗಳಲ್ಲೊಂದು #ಗುಜಮಸ

#sachingjz#gumata#ಗುಮಟ#ತೀರ್ಥಹಳ್ಳಿ#thirthahalli

KANNADA NAADU (KARNATAKA) -HISTORY*ಕನ್ನಡ ನಾಡಿನ ಇತಿಹಾಸನಮ್ಮ ಕನ್ನಡ ಭಾಷೆಯು 2000ಗಳಷ್ಟು ಹಿಂದಿನ ಇತಿಹಾಸವಿimages (7) KANNADA -GJ Kannada_script_evolution karnataka-110502054225phpapp02-4-638 kntk oix9ht old_kannada xÀðದ್ದ ಭಾಷೆಯಾಗಿದ್ದು ,★★★ ಕರ್ನಾಟಕ ನಮ್ಮ ರಾಜ್ಯ ★★★

 1.ಕರ್ನಾಟಕ ಎಂಬ ಹೆಸರಿನ ಪದದ ಬಳಕೆ ಪ್ರಪ್ರಥಮವಾಗಿ ಮಹಾಭಾರತದಲ್ಲಿ ಕಂಡು ಬಂದಿದೆ.
 2.ಪ್ರಾಚೀನ ಕಾಲದಲ್ಲಿ ಕರ್ನಾಟಕವನ್ನು ಕರುನಾಡು(ಕಪ್ಪು ಮಣ್ಣಿನ ನಾಡು) ಎಂದು ಕರೆಯುತ್ತಿದ್ದರು.
 3.ತಮಿಳು ಭಾಷೆಯ ಶಿಲಪ್ಪದಿಕಾರಂ ಕೃತಿಯಲ್ಲಿ ಕರುನಾಟ್ ಎಂಬ ಶಬ್ದದಿಂದ ಕರೆಯಲಾಗಿದೆ.
 4.ಕರುನಾಟ್ ಎಂಬ ಔಚಿತ್ಯವಾದ ಪದವನ್ನು ತಮಿಳರು ನೀಡಿರುತ್ತಾರೆ.
5.ಬಾದಾಮಿಯ ಚಾಲುಕ್ಯರ ಸೈನ್ಯಕ್ಕೆ ಹಿಂದೆಯೇ ಹೇಳಿರುವಂತೆ ಕರ್ಣಾಣಬಲ ಎಂಬ ಹೆಸರಿತ್ತು.
 6.ಇಂಡೋನೇಷಿಯಾದ ಜಾವಾ ದ್ವೀಪದಲ್ಲಿನ 12 ನೇಯ ಶತಮಾನದ ಒಂದು ಶಾಸನದಲ್ಲಿ ಕರ್ಣಾಟಕವನ್ನು ಉಲ್ಲೇಖಿಸಲಾಗಿದೆ.
7.ರಾಷ್ಟ್ರಕೂಟರ ಅಮೋಘವರ್ಷ ನೃಪತುಂಗನ ಕವಿ ಶ್ರೀ ವಿಜಯನ ಕವಿರಾಜಮಾರ್ಗದಲ್ಲಿ ಕರ್ನಾಟಕವು ಕಾವೇರಿ ನದಿಯಿಂದ ಗೋದಾವರಿ ನದಿಯವರೆಗೂ ವಿಸ್ತರಿಸಿತು ಎಂದು ಬರೆಯಲಾಗಿದೆ
8.ಭಾರತ ಸ್ವಾತಂತ್ರ್ಯ ಪಡೆದ ಸಂಸ್ಥಾನಗಳಲ್ಲಿ ಮೈಸೂರು ಎರಡನೇಯ ದೊಡ್ಡದಾದ ಸಾಮ್ರಾಜ್ಯವಾಗಿತ್ತು.
9.1953 ರಲ್ಲಿ ಮೈಸೂರು ಅರಸರ ಒಡೆತನದಲ್ಲಿದ್ದ 9 ಜಿಲ್ಲೆಗಳನ್ನು ಒಳಗೊಂಡ ಮೈಸೂರ ರಾಜ್ಯ ಉದಯವಾಯಿತು.

10.ನವೆಂಬರ್ 1956 ರಲ್ಲಿ ಭಾಷಾವಾರು ಪ್ರಾಂತ್ಯಗಳು ಕರ್ನಾಟಕದಲ್ಲಿ ವಿಲಿನಗೊಂಡು ವಿಶಾಲ ಮೈಸೂರು ರಾಜ್ಯ ಉದಯವಾಯಿತು.
11.ಪ್ರತಿವರ್ಷ ನವೆಂಬರ್ 01, ರಂದು ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುವುದು.
12.1973 ನವೆಂಬರ್ 1 ರಂದು ಕರ್ನಾಟಕ ಎಂದು ನಾಮಕರಣ ಮಾಡಲಾಯಿತು, ಆಗ ಮುಖ್ಯಮಂತ್ರಿಯಾಗಿದ್ದವರು ದೇವರಾಜ್ ಅರಸ್.
13.ಕರ್ನಾಟಕ ಎಂಬ ಪದವನ್ನು ನೀಡಿದವರು ಆಲೂರು ವೆಂಕಟರಾಯರು.


★★★ ಕರ್ನಾಟಕದ ಪ್ರಥಮಗಳು ★★


1.ಮೊದಲ ಪತ್ರಿಕೆ : ಮಂಗಳೂರು ಸಮಾಚಾರ್.
2.ಮೊದಲ ವರ್ಣಚಲನಚಿತ್ರ : ಸತಿಸುಲೋಚನಾ.
3.ಕನ್ನಡ ಭಾಷೆಯ ಮೊದಲ ಪದ : ಇಸಿಲ.
4.ಮೊದಲ ಜ್ಞಾನಪೀಠ ವಿಜೇತ : ಕುವೆಂಪು.
5.ಕನ್ನಡ ಭಾಷೆಯ ಮೊದಲ ಶಾಸನ : ಹಲ್ಮಿಡಿ ಶಾಸನ.
6.ಕನ್ನಡದ ಮೊದಲ ನಾಟಕ : ಮಿತ್ರಾವಿಂದ ಗೋವಿಂದ
7.ಕನ್ನಡದ ಮೊದಲ ವಂಶ : ಕದಂಬ
8.ಉತ್ತರ ಭಾರತಕ್ಕೆ ದಂಡಯಾತ್ರೆ ಕೈಗೊಂಡ ಮೊದಲ ಅರಸ : 1 ನೇ ಧ್ರುವ
9.ಕನ್ನಡದ ಮೊದಲ ಕಾದಂಬರಿ : ಇಂದಿರಾಬಾಯಿ.

10.ಜೈವಿಕ ತಂತ್ರಜ್ಞಾನ ನೀತಿಯನ್ನು ರೂಪಿಸಿದ ಮೊದಲ ರಾಜ್ಯ


★★★ ಕರ್ನಾಟಕದ ಭೌಗೋಳಿಕ ಸ್ಥಾನ ★★★


1.ಕರ್ನಾಟಕವು ಭಾರತದ ದಕ್ಷಿಣ ದಿಕ್ಕಿಗಿದೆ.
2.ಕರ್ನಾಟಕ ಭಾರತದ ಪರ್ಯಾಯ ದ್ವೀಪದ ಪಶ್ಚಿಮ ಮಧ್ಯಭಾಗದಲ್ಲಿದೆ
3.ಅಕ್ಷಾಂಶ – 11 – 31′ ರಿಂದ 18 – 45′ ಉತ್ತರ ಅಕ್ಷಾಂಶದಲ್ಲಿದೆ.
4.ರೇಖಾಂಶ – 74 – 12′ ರಿಂದ 78 – 40′ ಪೂರ್ವ ರೇಖಾಂಶದಲ್ಲಿದೆ.
5.ಉತ್ತರದ ತುದಿ – ಬೀದರ ಜಿಲ್ಲೆಯ ಔರಾದ ತಾಲ್ಲೂಕ.
6.ದಕ್ಷಿಣದ ತುದಿ – ಚಾಮರಾಜನಗರ ಜಿಲ್ಲೆ.
7.ಪಶ್ಚಿಮದ ತುದಿ – ಉತ್ತರ ಕನ್ನಡ ಜಿಲ್ಲೆಯ ಕಾರವಾರ.
8.ಪೂರ್ವದ ತುದಿ – ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕ,
9.ದಕ್ಷಿಣೋತ್ತರವಾಗಿ ಕರ್ನಾಟಕದ ಉದ್ದ – 750
10.ಪೂರ್ವ ಪಶ್ಚಿಮವಾಗಿ ಕರ್ನಾಟಕದ ಉದ್ದ – 400
11.ಕರ್ನಾಟಕದೊಂದಿಗೆ ಭೂಗಡಿ ಹೊಂದಿರುವ ರಾಜ್ಯಗಳು – ಮಹಾರಾಷ್ಟ್ರ,ಗೋವಾ,ಕೇರಳ,ತಮಿಳುನಾಡು,ಆಂದ್ರಪ್ರದೇಶ
12.ಕರ್ನಾಟಕವು ಗೋಡಂಬಿಯ ಆಕಾರವನ್ನು ಹೋಲುತ್ತದೆ.


★★★ ಕರ್ನಾಟಕದ ವಿಸ್ತೀರ್ಣ ★★★


1.ಒಟ್ಟು ವಿಸ್ತೀರ್ಣ – 191791 ಚಕಿಮೀಗಳು.
2.ದೇಶದ ಒಟ್ಟು ವಿಸ್ತೀರ್ಣದಲ್ಲಿ ಕರ್ನಾಟಕದ ವಿಸ್ತೀರ್ಣ – 5.83
3.ವಿಸ್ತೀರ್ಣದಲ್ಲಿ 7 ನೇ ದೊಡ್ಡ ರಾಜ್ಯ.
4.ಜನಸಂಖ್ಯೆ – 61130704 (2011 ಜನಗಣತಿಯಂತೆ)
5.ಜನಸಂಖ್ಯೆಯಲ್ಲಿ ಭಾರತದ 10 ನೇ ಸ್ಥಾನ ಹೊಂದಿದೆ.
6.ಕಂದಾಯ ವಿಭಾಗಗಳು – 04
7.ಮಹಾನಗರಗಳು – 10
8.ಜಿಲ್ಲೆಗಳು – 30
9.ತಾಲ್ಲೂಕಗಳು – 177
10.ಹೋಬಳಿಗಳು – 347
11.ಮುನಸಿಪಲ್ ಕಾರ್ಪೋರೇಷನಗಳು – 219
12.ಮಹಾನಗರಗಳು – ಬೆಂಗಳೂರು,ಹುಬ್ಬಳಿ-ಧಾರವಾಡ,ಮೈಸೂರು,ಕಲಬುರಗಿ,ಬೆಳಗಾವಿ,ಮಂಗಳೂರು,ಬಿಜಾಪೂರ,ದಾವಣಗೆರೆ,ಬಳ್ಳಾರಿ ಮತ್ತು ತುಮಕೂರು.
13.ವಿಸ್ತೀರ್ಣದಲ್ಲಿ ದೊಡ್ಡ ಜಿಲ್ಲೆ – ಬೆಳಗಾವಿ
14.ವಿಸ್ತೀರ್ಣದಲ್ಲಿ ಚಿಕ್ಕದಾದ ಜಿಲ್ಲೆ – ಬೆಂಗಳೂರು ನಗರ
15.ನಾಲ್ಕು ಕಂದಾಯ ವಿಭಾಗಗಳು – ಬೆಂಗಳುರು, ಮೈಸೂರು,ಬೆಳಗಾವಿ,ಕಲಬುರಗಿ


★★★ ಕರ್ನಾಟಕದ ಒಂದು ಪಕ್ಷಿನೋಟ ★★★


1.ರಾಜ್ಯಪಕ್ಷಿ – ನೀಲಕಂಠ(ಇಂಡಿಯನ್ ರೋಲರ್)
2.ರಾಜ್ಯ ಪ್ರಾಣಿ – ಆನೆ.
3.ರಾಜ್ಯ ವೃಕ್ಷ – ಶ್ರೀಗಂಧ.
4.ರಾಜ್ಯಪುಷ್ಪ – ಕಮಲ
5.ನಾಡಗೀತೆ – ಜಯಭಾರತ ಜನನಿಯ ತನುಜಾತೆ(ಕುವೆಂಪು ರಚಿತ)
6.ಕರ್ನಾಟಕ ಸರ್ಕಾರದ ಚಿನ್ಹೆ – ಗಂಡಭೇರುಂಡ
7.ಗಂಡಭೇರುಂಡ ಎರಡು ತಲೆಗಳನ್ನು ಹೊಂದಿರುವ ಕಾಲ್ಪನಿಕ ಪಕ್ಷಿಯಾಗಿದೆ.
8.ಭಾರತದಲ್ಲಿ ಅತಿ ಹೆಚ್ಚು ಶ್ರೀಗಂಧದ ಮರಗಳನ್ನು ಬೆಳೆಯುವ ರಾಜ್ಯ – ಕರ್ನಾಟಕ
9.ಕರ್ನಾಟಕದ ಮೊದಲ ನಾಡಗೀತೆ – ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು(ಹುಯಿಲಗೋಳ್ ನಾರಾಯಣರಾವ)
10.ಕರ್ನಾಟಕ ಚಲನಚಿತ್ರ ಮಂಡಳಿಯ ಹೆಸರು – ಸ್ಯಾಂಡಲವುಡ್.
11.ಕರ್ನಾಟಕ ದ್ವಿಸದನ ವ್ಯವಸ್ಥೆ ಹೊಂದಿದೆ.
12.ವಿಧಾನಸಭೆಯ ಸದಸ್ಯರ ಸಂಖ್ಯೆ – 225.
13.ವಿಧಾನ ಪರಿಷತ್ತ ಸದಸ್ಯರ ಸಂಖ್ಯೆ – 75
14.ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ – 28
15.ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ – 12
16.ಭಾರತದಲ್ಲಿಯೇ ಪ್ರಥಮಬಾರಿಗೆ ಹಿಂದುಳಿದ ವರ್ಗಗಳ ಆಯೋಗವೊಂದನ್ನು ನೇಮಿಸಿದ್ದು ಮೈಸೂರು ರಾಜ್ಯ – 1918 ರಲ್ಲಿ ಮಿಲ್ಲರ ಆಯೋಗ.
17.ಮೊದಲ ರಾಜ್ಯಪಾಲ – ಜಯಚಾಮರಾಜೇಂದ್ರ ಒಡೆಯರ್
18.ಮೊದಲ ಮುಖ್ಯಮಂತ್ರಿ – ಕೆ.ಚಂಗಲರಾಯರೆಡ್ಡಿ.
19.ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ – ಎಸ್,ನಿಜಲಿಂಗಪ್ಪ
20.ವಿಧಾನಸಭೆಯ ಮೊದಲ ಸಭಾಪತಿ – ವಿ,ವೆಂಕಟಪ್ಪ
21.ವಿಧಾನಸಭೆಯ ಏಕೈಕ ಮಹಿಳಾ ಸಭಾಪತಿ – ಕೆ.ಎಸ್.ನಾಗರತ್ನಮ್ಮ
22.ಕರ್ನಾಟಕ ಹೈಕೋರ್ಟಿನ ಮೊದಲ ಮುಖ್ಯ ನ್ಯಾಯಧೀಶ – ಆರ್ , ವೆಂಕಟರಾಮಯ್ಯ.
23.ಭಾರತದ ಉಪಗ್ರಹ ನಿಯಂತ್ರಣ ಕೇಂದ್ರವಿರಿವುದು – ಹಾಸನದಲ್ಲಿ
24.ಕಾಫಿ ಹಾಗೂ ಮೆಣಸು ಉತ್ಪಾದನೆಯಲ್ಲಿ ಕರ್ನಾಟಕವು – ಪ್ರಥಮ ಸ್ಥಾನದಲ್ಲಿದೆ.

ಅಂತೆಯೇ ,

ಕನ್ನಡದಮೊದಲುಗಳು

1

ಅಚ್ಚಕನ್ನಡದಮೊದಲದೊರೆ

ಮಯೂರವರ್ಮ

2

ಕನ್ನಡದಮೊದಲಕವಿ

ಪಂಪ

3

ಕನ್ನಡದಮೊದಲಶಾಸನ

ಹಲ್ಮಿಡಿಶಾಸನ

4

ತ್ರಿಪದಿಛಂದಸ್ಸಿನಮೊದಲಬಳಕೆ

ಬಾದಾಮಿಯಕಪ್ಪೆಅರಭಟ್ಟನಶಾಸನ

5

ಕನ್ನಡದಮೊದಲಲಕ್ಷಣಗ್ರಂಥ

ಕವಿರಾಜಮಾರ್ಗ

6

ಕನ್ನಡದಮೊದಲನಾಟಕ

ಮಿತ್ರವಿಂದಗೋವಿಂದ

7

ಕನ್ನಡದಮೊದಲಮಹಮದೀಯಕವಿ

ಶಿಶುನಾಳಷರೀಪ

8

ಕನ್ನಡದಮೊದಲಕವಯಿತ್ರಿ

ಅಕ್ಕಮಹಾದೇವಿ

9

ಕನ್ನಡದಮೊದಲಸ್ವತಂತ್ರಸಾಮಾಜಿಕಕಾದಂಬರಿ

ಇಂದಿರಾಬಾಯಿ

10

ಕನ್ನಡದಮೊದಲಪತ್ತೆದಾರಿಕಾದಂಬರಿ

ಚೊರಗ್ರಹಣತಂತ್ರ

11

ಕನ್ನಡದಮೊದಲಛಂದೋಗ್ರಂಥ

ಛಂದೋಂಬುಧಿ (ನಾಗವರ್ಮ)

12

ಕನ್ನಡದಮೊದಲಸಾಮಾಜಿಕನಾಟಕ

ಇಗ್ಗಪ್ಪಹೆಗ್ಗಡೆಯವಿವಾಹಪ್ರಹಸನ

13

ಕನ್ನಡದಮೊದಲಜ್ಯೋತಿಷ್ಯಗ್ರಂಥ

ಜಾತಕತಿಲಕ

14

ಕನ್ನಡದಮೊದಲಗಣಿತಶಾಸ್ತ್ರಗ್ರಂಥ

ವ್ಯವಹಾರಗಣಿತ

15

ಕನ್ನಡದಮೊದಲಕಾವ್ಯ

ಆದಿಪುರಾಣ

16

ಕನ್ನಡದಮೊದಲಗದ್ಯಕೃತಿ

ವಡ್ಡಾರಾಧನೆ

17

ಕನ್ನಡದಲ್ಲಿಮೊದಲುಅಚ್ಚಾದಕೃತಿ

ಎಗ್ರಾಮರ್ಆಫ್ದಿಕನ್ನಡಲಾಂಗ್ವೇಜ್

18

ಕನ್ನಡದಮೊದಲಪತ್ರಿಕೆ

ಮಂಗಳೂರುಸಮಾಚಾರ

19

ಹೊಸಗನ್ನಡದಶಬ್ದವನ್ನುಮೊದಲುಬಳಸಿದವರು

ಚಂದ್ರರಾಜ

20

ಕನ್ನಡದಲ್ಲಿಮೊದಲುಕಥೆಬರೆದವರು

ಪಂಜೆಮಂಗೇಶರಾಯರು

21

ಕನ್ನಡದಮೊದಲಪ್ರೇಮಗೀತೆಗಳಸಂಕಲನ

ಒಲುಮೆ

22

ಕನ್ನಡಸಾಹಿತ್ಯಪರಿಷತ್ತಿನಮೊದಲಅಧ್ಯಕ್ಷರು

ಹೆಚ್.ವಿ.ನಂಜುಂಡಯ್ಯ

23

ಕನ್ನಡದಮೊದಲಸ್ನಾತಕೋತ್ತರಪದವೀಧರ

ಆರ್.ನರಸಿಂಹಾಚಾರ್

24

ಕನ್ನಡದಮೊದಲವಚಚನಕಾರ

ದೇವರದಾಸಿಮಯ್ಯ

25

ಹೊಸಗನ್ನಡದಮೊದಲಮಹಾಕಾವ್ಯ

ಶ್ರೀರಾಮಾಯಣದರ್ಶನಂ

26

ಪಂಪಪ್ರಶಸ್ತಿಪಡೆದಮೊದಲಕನ್ನಡಿಗ

ಕುವೆಂಪು

27

ಕನ್ನಡದಮೊದಲಕನ್ನಡ-ಇಂಗ್ಲೀಷ್ನಿಘಂಟುರಚಿಸಿದವರು

ಆರ್.ಎಫ್.ಕಿಟೆಲ್

28

ಕನ್ನಡದಮೊಟ್ಟಮೊದಲಸಮಕಲನಗ್ರಂಥ

ಸೂಕ್ತಿಸುಧಾರ್ಣವ

29

ಮೊದಲಅಖಿಲಭಾರತಕನ್ನಡಸಾಹಿತ್ಯಸಮ್ಮೇಳನನಡೆದಸ್ಥಳ

ಬೆಂಗಳೂರು (1915)

30

ಕರ್ನಾಟಕರತ್ನಪ್ರಶಸ್ತಿಪಡೆದಮೊದಲಕವಿ

ಕುವೆಂಪು

31

ಕನ್ನಡದಮೊದಲವಿಶ್ವಕೋಶ

ವಿವೇಕಚಿಂತಾಮಣಿ

32

ಕನ್ನಡದಮೊದಲವೈದ್ಯಗ್ರಂಥ

ಗೋವೈದ್ಯ

33

ಕನ್ನಡದಮೊದಲಪ್ರಾಧ್ಯಾಪಕರು

ಟಿ.ಎಸ್.ವೆಂಕಣ್ಣಯ್ಯ

34

ಕನ್ನಡದಲ್ಲಿರಚಿತಗೊಂಡಮೊದಲರಗಳೆ

ಮಂದಾನಿಲರಗಳೆ

35

ಕನ್ನಡದಮೊದಲಹಾಸ್ಯಪತ್ರಿಕೆ

ವಿಕಟಪ್ರತಾಪ

ಹಾಗೆಯೇ,


ನಿಮಗೆಷ್ಟು ಗೊತ್ತು!?


1) ದೇವನಹಳ್ಳಿ ಕೋಟೆಯನ್ನು ಕಟ್ಟಿಸಿದವರು ಯಾರು?

– ಮಲ್ಲಬೈರೆಗೌಡ.

2) ಭಾರತದಲ್ಲಿ ಮೊದಲಬಾರಿಗೆ ಕ್ಷಿಪಣಿಯ ಪ್ರಯೋಗ ಯಾರು ಮಾಡಿದರು?

– ಟಿಪ್ಪು ಸುಲ್ತಾನ್.

3) ಭಾರತದ ಇತಿಹಾಸದಲ್ಲಿ ಅಬೇದ್ಯ ಎಂದು ಕರೆಯಲ್ಪಡುವ ಕೋಟೆ ಯಾವುದು?

– ಚಿತ್ರದುರ್ಗ.

4) “ಕರ್ನಾಟಕ ರತ್ನ ರಮಾರಮಣ” ಎಂಬ ಬಿರುದು ಯಾರಿಗೆ ದೊರಕಿತ್ತು?

– ಕೃಷ್ಣದೇವರಾಯ.

5) ತುಂಗಾ ನದಿಗೆ ಇದ್ದ ಇನ್ನೊಂದು ಹೆಸರೇನು?

– ಪಂಪಾನದಿ.

6) “ಸ್ಟೇಟ್ ಬ್ಯಾಂಕ್ ಆಫ್ ಮೈಸೂರು” ಇದರ ಸಂಸ್ಥಾಪಕರು ಯಾರು?

– ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ.

7) ಕೈಗಾರಿಕಾ ಕ್ರಾಂತಿಗೆ ಒತ್ತು ಕೊಟ್ಟ ಮೊದಲ ರಾಜ ಯಾರು?

– ಹೈದರಾಲಿ.

8) ಕರ್ನಾಟಕದ ಮೊದಲ ಸಕ್ಕರೆ ಕಾರ್ಖಾನೆಯನ್ನು ಎಲ್ಲಿ ಸ್ಥಾಪಿಸಲಾಯಿತು?

– ಶ್ರೀರಂಗ ಪಟ್ಟಣದ ಪಾಲಹಳ್ಳಿ.

9) ಕೆಂಪೇಗೌಡರು ಕಟ್ಟಿಸಿದ ಬೆಂಗಳೂರುಕೋಟೆ ಯಾವ ಊರಿನಲ್ಲಿದೆ?

– ಕಲಾಸಿಪಾಳ್ಯ.

10) ವಿಧಾನ ಸೌದ”ವನ್ನು ಕಟ್ಟಿಸಿದವರು ಯಾರು?

– ಕೆಂಗಲ್ ಹನುಮಂತಯ್ಯ.

11) ಕನ್ನಡಕ್ಕೆ ಒಟ್ಟು ಎಷ್ಟು “ಜ್ಞಾನಪೀಠ” ಪ್ರಶಸ್ತಿ ದೊರೆತಿದೆ?

– 8

12) ಮೈಸೂರಿನಲ್ಲಿರುವ “ಬೃಂದಾವನ”ದ ವಿನ್ಯಾಸಗಾರ ಯಾರು?

– “ಸರ್. ಮಿರ್ಜಾ ಇಸ್ಮಾಯಿಲ್”

13) ಕರ್ನಾಟಕದಲ್ಲಿ ಸತತವಾಗಿ ಮೂರು ಸಾರಿ ಮುಖ್ಯಮಂತ್ರಿಯಾಗಿ ಯಾರು ಆಯ್ಕೆಯಾಗಿದ್ದರು?

– ರಾಮಕೃಷ್ಣ ಹೆಗ್ಗಡೆ.

14) “ಯುಸುಫಾಬಾದ್” ಎಂದು ಈಗಿನ ಯಾವ ಪ್ರದೇಶವನ್ನು ಕರೆಯುತಿದ್ದರು?

– ದೇವನಹಳ್ಳಿ (ದೇವನದೊಡ್ಡಿ)

15) ಕರ್ನಾಟಕದ ಯಾವ ಸಾಮ್ರಾಜ್ಯ ವೈಭವಕ್ಕೆ ಹೆಸರುವಾಸಿಯಾಗಿತ್ತು?

– ವಿಜಯನಗರ ಸಾಮ್ರಾಜ್ಯ.

16) ಶ್ರೀರಂಗ ಪಟ್ಟಣದ ಶ್ರೀ ರಂಗನಾಥ ಸ್ವಾಮಿಯ ಮೂಲ ದೇಗುಲವನ್ನು ಯಾರು ಕಟ್ಟಿಸಿದರು?

ತಿರುಮಲಯ್ಯ.

17″ಯದುರಾಯ ರಾಜ ನರಸ ಒಡೆಯರ್” ಕಟ್ಟಿಸಿದ ಕೋಟೆ ಯಾವುದು?

– ಶ್ರೀರಂಗ ಪಟ್ಟಣದ ಕೋಟೆ.

18) ಕರ್ನಾಟಕದಲ್ಲಿ ಸಂಪೂರ್ಣವಾಗಿ ಸಂಸ್ಕೃತ ಭಾಷೆಯನ್ನು ಮಾತನಾಡುವ ಹಳ್ಳಿ ಯಾವುದು?

– ಶಿವಮೊಗ್ಗ ಜಿಲ್ಲೆಯ ಮತ್ತೂರ್.

19) ಕರ್ನಾಟಕದ ಅತಿ ದೊಡ್ಡ ಜಾತ್ರೆ ಯಾವುದು?

– ಶಿರಸಿಯ ಮಾರಿಕಾಂಬ ಜಾತ್ರೆ.

20) ಅಂಗ್ಲ ಭಾಷೆಯ ಸಾಫ್ಟ್ ವೇರ್ ಮತ್ತು ಹಾರ್ಡ್ ವೇರ್ ಪದಗಳಿಗೆ ಕನ್ನಡದ ತಂತ್ರಂಶ ಮತ್ತು ಯಂತ್ರಾಂಶ ಎನ್ನುವ ಪದಗಳನ್ನು ಕೊಟ್ಟವರು ಯಾರು?

– ಹೆಚ್.ಎಸ್.ಕೃಷ್ಣ ಸ್ವಾಮಿ ಅಯ್ಯಂಗಾರ್. (ಹೆಚ್.ಎಸ್.ಕೆ)

21) ರಾಯಚೂರಿನ ಮೊದಲ ಹೆಸರೇನು?

– ಮಾನ್ಯಖೇಟ.

22) ಕನ್ನಡದ ಮೊದಲ ಕೃತಿ ಯಾವುದು?

– ಕವಿರಾಜ ಮಾರ್ಗ

23) ಪಂಪಾಪುರ ಎಂದು ಯಾವ ಪ್ರದೇಶವನ್ನು ಕರೆಯುತ್ತಿದ್ದರು.

ಹಂಪೆ.

24) ಜಗತ್ತಿನ ಎತ್ತರವಾದ ಏಕ ಶಿಲಾ ವಿಗ್ರಹ ಯಾವುದು?

– ಶ್ರಾವಣಬೆಳಗೊಳದ ಗೊಮ್ಮಟೇಶ್ವರ.

25) ಕರ್ನಾಟಕಕ್ಕೆ “ಪರಮವೀರ ಚಕ್ರ” ತಂದುಕೊಟ್ಟ ವೀರ ಕನ್ನಡಿಗ ಯಾರು?

– ಕರ್ನಲ್ ವಸಂತ್.
26) ಕರ್ನಾಟಕದ ಅತಿದೊಡ್ಡ ದೇವಾಲಯ ಯಾವುದು?

– ನಂಜನಗೂಡಿನ ಶ್ರೀ ಕಂಠೇಶ್ವರ ದೇವಾಲಯ.

27) ಕರ್ನಾಟಕದ ಅತಿ ಎತ್ತರವಾದ ಶಿಖರ ಯಾವುದು?

– ಮುಳ್ಳಯ್ಯನ ಗಿರಿ.

28) ಮೈಸೂರು ಅರಮನೆಯ ಹೆಸರೇನು?

– ಅಂಬಾವಿಲಾಸ ಅರಮನೆ.

29) ಕರ್ನಾಟಕಕ್ಕೇ ಮೊದಲು ಕಾಫಿ ಬೀಜವನ್ನು ತಂದವರು ಯಾರು?

– ಬಾಬಾ ಬುಡನ್ ಸಾಹೇಬ.

30) “ಕರ್ಣಾಟಕದ ಮ್ಯಾಂಚೆಸ್ಟಾರ್ ” ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ?

– ದಾವಣಗೆರೆ.

31) ಕರ್ನಾಟಕದಲ್ಲಿ ಅತಿಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು?

– ಆಗುಂಬೆ.

32) ಕರ್ನಾಟಕದ ಅತಿ ಚಿಕ್ಕ ಜಿಲ್ಲೆ ಯಾವುದು?

ಬೆಂಗಳೂರು ನಗರ ಜಿಲ್ಲೆ.

33) ಕರ್ನಾಟಕದ ಮೊದಲ ಉಪಲಬ್ದ ಶಾಸನ ಯಾವುದು?

– ಹಲ್ಮಿಡಿ ಶಾಸನ.

34) ಕರ್ನಾಟಕದ ರಾಜ್ಯ ಪಕ್ಷಿ ಯಾವುದು?

– ನೀಲಕಂಠ ಪಕ್ಷಿ.

35) ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು?

– ಕೆ.ಸಿ.ರೆಡ್ಡಿ.

36) ಕರ್ನಾಟಕದ ಮೊದಲ ರಾಜ ಪ್ರಮುಖರು (ರಾಜ್ಯಪಾಲರು) ಯಾರು?

– ಶ್ರೀ ಜಯಚಾಮರಾಜ ಒಡೆಯರು.

37) ಕರ್ನಾಟಕದ ಮೊದಲ ಕವಯತ್ರಿ ಯಾರು?

– ಅಕ್ಕಮಹಾದೇವಿ.

38) ಕನ್ನಡದ ಮೊದಲ ಉಪಲಬ್ದ ಗದ್ಯಕೃತಿ ಯಾವುದು?

– ವಡ್ಡರಾದನೆ.

39) ಕರ್ನಾಟಕದ ಮೊದಲ ವಿಶ್ವವಿದ್ಯಾನಿಲಯ ಯಾವುದು?

– ಮೈಸೂರು ವಿಶ್ವವಿಧ್ಯಾನಿಲಯ.

40) ಕನ್ನಡದ ಮೊದಲ ವ್ಯಾಕರಣ ಗ್ರಂಥ ಯಾವುದು? ಬರೆದವರು ಯಾರು?

– “ಕೇಶಿರಾಜ ವಿರಚಿತ” “ಶಬ್ದಮಣಿ ದರ್ಪಣಂ”

41) “ಕರ್ನಾಟಕ ಶಾಸ್ತ್ರೀಯಾ ಸಂಗೀತ”ದ ಪಿತಾಮಹ ಯಾರು?

– ಪುರಂದರ ದಾಸರು.

42) ಕರ್ನಾಟಕದ ಯಾವ ಜಿಲ್ಲೆಯಲ್ಲಿ ಉಷ್ಣ ವಿದ್ಯುತ್ ಸ್ಥಾವರವಿದೆ?

– ರಾಯಚೂರು ಜಿಲ್ಲೆ.

43) ಕರ್ನಾಟಕದ ರೇಷ್ಮೆ ಜಿಲ್ಲೆ ಯಾವುದು?

– ರಾಮನಗರ.

44) ಕರ್ನಾಟಕದ ಸಕ್ಕರೆ ಜಿಲ್ಲೆ ಯಾವುದು?

– ಮಂಡ್ಯ ಜಿಲ್ಲೆ.

45) ಕಾವೇರಿ ನದಿಯು ತನ್ನ ಪಾತ್ರದಲ್ಲಿ ಎಷ್ಟು ಜಲಪಾತಗಳನ್ನು ಸೃಷ್ಟಿಸುತ್ತದೆ? ಅವು ಯಾವುದು?

– ಮೂರು ಜಲಪಾತಗಳು. (೧) ಚುಂಚನ ಕಟ್ಟೆ ಜಲಪಾತ, (೨) ಶಿವನ ಸಮುದ್ರ (೩) ಹೋಗನೆಕಲ್ ಜಲಪಾತ.
46) ಕರ್ನಾಟಕ ರಾಜ್ಯದ ಧ್ವಜದಲ್ಲಿರುವ ಬಣ್ಣಗಳ ಸಂಕೇತ ಏನು?-

ಹಳದಿ: ಶಾಂತಿಯ ಸಂಕೇತ.ಕೆಂಪು: ಕ್ರಾಂತಿಯ ಸಂಕೇತ

47) ರಾಷ್ಟ್ರ ಧ್ವಜವನ್ನು ನೇಯುವ ಏಕಮಾತ್ರ ಸ್ಥಳ ಕರ್ನಾಟಕದಲ್ಲಿದೆ. ಇದು ಯಾವ ಊರು?

– ಗರಗ,

48) ಕರ್ನಾಟಕದ ಯಾವ ಜಿಲ್ಲೆಗೆ ರೈಲ್ವೆ ಮಾರ್ಗವಿಲ್ಲ?

– ಕೊಡಗು.

49) ಕರ್ನಾಟಕದ ಅತಿದೊಡ್ಡ ಅಣೆಕಟ್ಟು ಯಾವುದು?

– ಲಿಂಗನಮಕ್ಕಿ ಅಣೆಕಟ್ಟು.

K
50) ಕನ್ನಡಕ್ಕೆ ಮೊದಲ ಜ್ಞಾನಪೀಠಪ್ರಶಸ್ತಿ ತಂದುಕೊಟ್ಟವರು ಯಾರು?

    – ಕುವೆಂಪು


ಶಿವಮೊಗ್ಗದ ಬಗ್ಗೆ ನಿಮಗೆ ಗೊತ್ತಿಲ್ಲದ ಪ್ರಮುಖ ಮಾಹಿತಿಗಳು


ಶಿವಮೊಗ್ಗ ಎಂಬ ಹೆಸರು ‘ಶಿವ-ಮುಖ’ ಎಂಬ ಪದಪುಂಜದಿಂದ ಬಂದದ್ದು, ಜಲಸರಬರಾಜಿನ ಸೌಕರ್ಯವುಳ್ಳ ಶಿವಮೊಗ್ಗ ಜಿಲ್ಲೆ ಕರ್ನಾಟಕದ ಅನ್ನದ ಬಟ್ಟಲು ಎನ್ನಿಸಿಕೊಂಡಿದೆ.  ಕ್ರಿ.ಪೂ. 3ನೇ ಶತಮಾನದಲ್ಲಿ ಸಾಮ್ರಾಟ್ ಅಶೋಕನ ಮೌರ್ಯ ಸಾಮ್ರಾಜ್ಯದ ದಕ್ಷಿಣದ ತುದಿಯಾಗಿದ್ದಿತು. ಮುಂದಿನ ಶತಮಾನಗಳಲ್ಲಿ ಅನೇಕ ರಾಜಮನೆತನಗಳ ಆಳ್ವಿಕೆಯಲ್ಲಿ ಈ ಪ್ರದೇಶ ಇದ್ದಿತು: 4ನೇ ಶತಮಾನದಲ್ಲಿ ಕದಂಬರು, 6ನೇ ಶತಮಾನದಲ್ಲಿ ಚಾಲುಕ್ಯರು ಮತ್ತು ಅವರ ಸಾಮಂತರಾದ ಗಂಗರು, 8ನೇ ಶತಮಾನದಲ್ಲಿ ರಾಷ್ಟ್ರಕೂಟರು, 11ನೇಯದರಲ್ಲಿ ಹೊಯ್ಸಳರು ಮತ್ತು 15ನೇ ಶತಮಾನದಲ್ಲಿವಿಜಯನಗರದ ಅರಸರು ಈ ಪ್ರದೇಶವನ್ನು ಆಳಿದೆ ರಾಜಮನೆತನಗಳಲ್ಲಿ ಪ್ರಮುಖರು. ಶಿವಮೊಗ್ಗ ನಗರಕ್ಕೆ ಸ್ವತಂತ್ರ ವ್ಯಕ್ತಿತ್ವ ಬಂದದ್ದು 16ನೇ ಶತಮಾನದ ಕೆಳದಿ ನಾಯಕರ ಆಳ್ವಿಕೆಯಲ್ಲಿ. 17ನೇ ಶತಮಾನದ ನಂತರ ಭಾರತ ಸ್ವಾತಂತ್ರ್ಯದ ವರೆಗೂ ಶಿವಮೊಗ್ಗ ಮೈಸೂರು ಸಂಸ್ಥಾನದ ಭಾಗವಾಗಿದ್ದಿತು.

ಶಿವಮೊಗ್ಗ  ಕರ್ನಾಟಕ ರಾಜ್ಯದ ಒಂದು ನಗರ. ಶಿವಮೊಗ್ಗ ಮಹಾನಗರವು ಈ ಜಿಲ್ಲೆಯ ರಾಜಧಾನಿಯಾಗಿದೆ. ಶಿವಮೊಗ್ಗ ಜಿಲ್ಲೆ ಕರ್ನಾಟಕದ ನಿಸರ್ಗಭರಿತ ಮಲೆನಾಡಿನ ಒಂದು ಭಾಗವಾಗಿದೆ.

ಸಹ್ಯಾದ್ರಿ ಪರ್ವತಶ್ರೇಣಿ ಮತ್ತು ಅಲ್ಲಿ ಉಗಮಗೊಳ್ಳುವ ನದಿ-ಉಪನದಿಗಳು ಶಿವಮೊಗ್ಗಕ್ಕೆ ಯಥೇಚ್ಛ ನೈಸರ್ಗಿಕ ಸೌಂದರ್ಯವನ್ನು ತಂದುಕೊಟ್ಟಿವೆ. ಶಿವಮೊಗ್ಗದಿಂದ 113 ಕಿಮೀ ದೂರದಲ್ಲಿರುವ ಜಗತ್ಪ್ರಸಿದ್ಧ ಜೋಗದಜಲಪಾತ ಪ್ರಕೃತಿಯ ಒಂದು ಅಪೂರ್ವ ದೃಶ್ಯ. ಇಲ್ಲಿ ಶರಾವತಿ ನದಿ 235 ಮೀ ಎತ್ತರದಿಂದ ಸುಮನೋಹರವಾಗಿ ಧುಮುಕುತ್ತದೆ. ರಾಜ, ರಾಣಿ, ರೋರರ್ ಮತ್ತು ರಾಕೆಟ್ ಎಂಬ ನಾಲ್ಕು ವಿಭಿನ್ನ ಪ್ರವಾಹಗಳಾಗಿ ಧುಮುಕುವ ಶರಾವತಿ ಏಷ್ಯದ ಅತಿ ಎತ್ತರದ ಜಲಪಾತವನ್ನು ನಿರ್ಮಿಸಿದೆ. ಮಳೆಗಾಲದ ಸಮಯದಲ್ಲಿ ಕಾಮನ ಬಿಲ್ಲುಗಳನ್ನು ನಿರ್ಮಿಸಿಕೊಂಡು ಅತ್ಯದ್ಭುತ ದೃಶ್ಯವನ್ನು ಜಲಪಾತ ಪ್ರದರ್ಶಿಸುತ್ತದೆ.

ತುಂಗಭದ್ರಾ, ಶರಾವತಿ, ಕುಮುದ್ವತಿ ಮತ್ತು ಇತರ ನದಿಗಳಿಂದ ಜಲಸರಬರಾಜಿನ ಸೌಕರ್ಯವುಳ್ಳ ಶಿವಮೊಗ್ಗ ಜಿಲ್ಲೆ ಕರ್ನಾಟಕದ ಅನ್ನದ ಬಟ್ಟಲು ಎನ್ನಿಸಿಕೊಂಡಿದೆ.

ಶಿವಮೊಗ್ಗ ಎಂಬ ಹೆಸರು ‘ಶಿವ-ಮುಖ’ ಎಂಬ ಪದಪುಂಜದಿಂದ ಬಂದದ್ದು. ಇನ್ನೊಂದು ವ್ಯುತ್ಪತ್ತಿಯಂತೆ ಇದು ‘ಸಿಹಿ-ಮೊಗೆ’ (ಸಿಹಿಯಾದ ಮೊಗ್ಗು) ಎಂದಿದ್ದು ಅದು ‘ಶಿವಮೊಗ್ಗ’ವಾಗಿ ಮಾರ್ಪಾಟುಹೊಂದಿದೆ.ಈ ಪ್ರದೇಶವು ಕ್ರಿ.ಪೂ. 3ನೇ ಶತಮಾನದಲ್ಲಿ ಸಾಮ್ರಾಟ್ ಅಶೋಕನ ಮೌರ್ಯ ಸಾಮ್ರಾಜ್ಯದ ದಕ್ಷಿಣದ ತುದಿಯಾಗಿದ್ದಿತು. ಮುಂದಿನ ಶತಮಾನಗಳಲ್ಲಿ ಅನೇಕ ರಾಜಮನೆತನಗಳ ಆಳ್ವಿಕೆಯಲ್ಲಿ ಈ ಪ್ರದೇಶ ಇದ್ದಿತು: 4ನೇ ಶತಮಾನದಲ್ಲಿ ಕದಂಬರು, 6ನೇ ಶತಮಾನದಲ್ಲಿ ಚಾಲುಕ್ಯರು ಮತ್ತು ಅವರ ಸಾಮಂತರಾದ ಗಂಗರು, 8ನೇ ಶತಮಾನದಲ್ಲಿ ರಾಷ್ಟ್ರಕೂಟರು, 11ನೇಯದರಲ್ಲಿ ಹೊಯ್ಸಳರು ಮತ್ತು 15ನೇ ಶತಮಾನದಲ್ಲಿವಿಜಯನಗರದ ಅರಸರು ಈ ಪ್ರದೇಶವನ್ನು ಆಳಿದೆ ರಾಜಮನೆತನಗಳಲ್ಲಿ ಪ್ರಮುಖರು. ಶಿವಮೊಗ್ಗ ನಗರಕ್ಕೆ ಸ್ವತಂತ್ರ ವ್ಯಕ್ತಿತ್ವ ಬಂದದ್ದು 16ನೇ ಶತಮಾನದ ಕೆಳದಿ ನಾಯಕರ ಆಳ್ವಿಕೆಯಲ್ಲಿ. 17ನೇ ಶತಮಾನದ ನಂತರ ಭಾರತ ಸ್ವಾತಂತ್ರ್ಯದ ವರೆಗೂ ಶಿವಮೊಗ್ಗ ಮೈಸೂರು ಸಂಸ್ಥಾನದ ಭಾಗವಾಗಿದ್ದಿತು.

ಪ್ರವಾಸೀ ತಾಣಗಳು

ಜೋಗದ ಜಲಪಾತ

ಚಂದ್ರಗುತ್ತಿ “ಶ್ರೀ ರೇಣುಕಾಂಬ ದೇವಸ್ಥಾನ” ಮತ್ತು ಕೋಟೆ.

​​ 12ನೇ ಶತಮಾನದ ಲಕ್ಷ್ಮೀ ನರಸಿಂಹ ಸ್ವಾಮೀ ದೇವಸ್ಥಾನ, ಭದ್ರಾವತಿ

ಲಿಂಗನಮಕ್ಕಿ ಅಣೆಕಟ್ಟು

ವನಕೆ-ಅಬ್ಬೆ ಜಲಪಾತ

ಭದ್ರಾ ನದಿ ಯೋಜನೆ, ಲಕ್ಕವಳ್ಳಿ

ತು೦ಗಾ ನದಿ ಯೋಜನೆ,ಗಾಜನೂರು ಅಣೆಕಟ್ಟು,

ಆಗು೦ಬೆಯ ವಿಶ್ವಪ್ರಸಿದ್ದ ಸೊರ್ಯಾಸ್ತ.

ಮ೦ಡಗದ್ದೆಯ ಪಕ್ಷಿದಾಮ.

ಅ೦ಬುತೀರ್ಥ, ಶರಾವತಿಯ ಉಗಮ ಸ್ಥಾನ.

ಕು೦ದಾದ್ರಿ ಬೆಟ್ಟ.

ಕುಪ್ಪಳ್ಳಿಯ ಕವಿಶೈಲ.

ಕೋಟೆ ಶ್ರೀ ಸೀತಾರಾಮಾ೦ಜನೇಯ ಸ್ವಾಮಿ ದೇವಸ್ಥಾನ, ಶಿವಮೊಗ್ಗ.

ಕೂಡ್ಲಿ – ತುಂಗಾ ಮತ್ತು ಭದ್ರಾ ನದಿಗಳ ಸಂಗಮ ಆಗುವ ಪ್ರದೇಶ.

ಹಿಡ್ಲುಮನೆ ಜಲಪಾತ (ನಿಟ್ಟೂರು)

ಸಿರಿಮನೆ ಜಲಪಾತ

ದಬ್ಬೆ ಜಲಪಾತ

ಚೀಲನೂರು ಗ್ರಾಮದ ಜೋಗದ ಜಲಪಾತ

ಕೊಡಚಾದ್ರಿ ಬೆಟ್ಟ

ಶಿವಪ್ಪನಾಯಕನ ಕೋಟೆ (ಬಿದನೂರು ನಗರ)

ಸಿಗಂದೂರು

ತಾವರೆ ಕೊಪ್ಪದ ಸಿಂಹ ಧಾಮ

ಚೀಲನೂರು ಸೊರಬ ತಾಲ್ಲೊಕು.

ಸೊರಬ ತಾಲೂಕಿನಲ್ಲಿರುವ ಗುಡವಿ ಪಕ್ಷಿಧಾಮ (ಕರ್ನಾಟಕದ ೨ನೇ ಅತಿದೊಡ್ಡ ಪಕ್ಷಿಧಾಮ)

ಗಿರಿ-ಶಿಖರಗಳು

ಆಗುಂಬೆ, ಆಗುಂಬೆ ಸೂರ್ಯಾಸ್ತಕ್ಕೆ ಪ್ರಸಿದ್ಧ

ಕೊಡಚಾದ್ರಿ.

ಕುಂದಾದ್ರಿ ಬೆಟ್ಟ. ಜೈನ ಕ್ಷೇತ್ರ

ಬರೆಕಲ್ ಬತೆರಿ

ನಿಶಾನೆ ಗುಡ್ಡ

ಹೆದ್ದಾರಿಖಾನ್

ಮೊಳಕಾಲ್ಮುರಿ ಗುಡ್ಡ

ಜೊಗಿ ಗುಡ್ಡ

ಮುಪ್ಪಾನೆ

ನದಿಗಳು

ತುಂಗಾ

ಭದ್ರಾ

ಶರಾವತಿ

ಕುಮುದ್ವತಿ

ವೇದಾವತಿ

ವರದಾ

ಕುಶಾವತಿ

ದ೦ಡಾವತಿ

ಚರಿತ್ರೆ ಮತ್ತು ಧರ್ಮ

ಕೆಳದಿ-ಇಕ್ಕೇರಿ, ಕೆಳದಿ ನಾಯಕರ ರಾಜಧಾನಿಗಳು. ಸಾಗರ ತಾಲ್ಲೂಕು

ನಗರ, ಬಿದನೂರು ಸಂಸ್ಥಾನದ ರಾಜಧಾನಿ

ಬಳ್ಳಿಗಾವಿಯ ಕೇದಾರೇಶ್ವರ ದೇವಾಲಯ

ಶಿವಪ್ಪ ನಾಯಕನ ಅರಮನೆ

ಸೇಕ್ರೆಡ್ ಹಾರ್ಟ್ ಚರ್ಚ್, ಭಾರತದಲ್ಲಿ ಎರಡನೆ ಅತಿ ದೊಡ್ಡ ಚರ್ಚ್

ಕವಲೇದುರ್ಗದ ಕೋಟೆ, ಕೆಳದಿ ಸಂಸ್ಥಾನದ ರಾಜಧಾನಿ. ಈಗ ಕೋಟೆಯ ಪಳಯುಳಿಕೆ ಮಾತ್ರ ಇದೆ.

ತೀರ್ಥಹಳ್ಳಿ ತಾಲ್ಲೂಕಿನ ಬೆಟ್ಟಬಸರವಾನಿ ಮತ್ತು ಮರಹಳ್ಳಿ ಗ್ರಾಮಗಳಲ್ಲಿ ಜೈನ ಸಂಪ್ರದಾಯದ ಪಳಿಯುಳಿಕೆ ಇವೆ.

ಹೊಸನಗರ ತಾಲ್ಲೂಕಿನ ಹುಂಚ ಗ್ರಾಮದಲ್ಲಿ ಜೈನ ಸಂಪ್ರದಾಯದ ಮಠ ಮತ್ತು ಪದ್ಮಾವತಿ ದೇವಿಯ ದೇವಸ್ಥಾನವಿದೆ

ಹಣಗೇರೆಕಟ್ಟೆ ಹಿಂದು ಮುಸ್ಲಿಂ ಧರ್ಮಗಳ ಪವಿತ್ರ ಸ್ಥಳವಾಗಿದೆ.

ನಾಡಕಲಸಿ ಸಾಗರ ತಾಲ್ಲೂಕು ; ಪ್ರಾಚೀನ ದೇವಾಲಯ

ವನ್ಯಜೀವಿ

ತಾವರೆಕೊಪ್ಪ, ಹುಲಿ ಮತ್ತು ಸಿಂಹಧಾಮ

ಸಕ್ಕರೆಬೈಲು, ಆನೆ ತರಬೇತಿ ಶಿಬಿರ

ಮಂಡಗದ್ದೆ ಪಕ್ಷಿಧಾಮ, ಕುಕ್ಕನ ಗುಡ್ಡಾ, ಗುಡವಿ

ಸೊರಬ ತಾಲೂಕೀನ ಚೀಲನೂರು ಕಾಡು ನವಿಲುಗಳಿಗೆ ವಾಸಸ್ಥಾನವಾಗಿದೆ.

ಐತಿಹಾಸಿಕ ವ್ಯಕ್ತಿಗಳು

ಕೆಳದಿಯ ಚೆನ್ನಮ್ಮಾಜಿ

ಅಲ್ಲಮಪ್ರಭು ದೇವರು

ಕೆಳದಿ ಶಿವಪ್ಪ ನಾಯಕ

ಅಕ್ಕಮಹಾದೇವಿ, [ ಉಡುತಡಿ ,ಶಿಕಾರಿಪುರ ತಾಲ್ಲೂಕು,ಶಿವಮೊಗ್ಗ ಜಿಲ್ಲೆ]

ರಾಜಕೀಯ ವ್ಯಕ್ತಿಗಳು

         ಕಡಿದಾಳ್ ಮಂಜಪ್ಪ, ಮಾಜಿ ಮುಖ್ಯಮಂತ್ರಿಗಳು

ಶಾಂತವೇರಿ ಗೋಪಾಲಗೌಡ, ಸಮಾಜವಾದಿ ನಾಯಕರು

ದಿ.ಎ.ಆರ್. ಬದರಿನಾರಾಯಣ್- ಮಾಜಿ ಮಂತ್ರಿಗಳು

ದಿ.ಶೀರ್ನಾಳಿ ಚಂದ್ರಶೇಕರ್ -ಮಾಜಿ ಶಾಸಕರು ಹೊಸನಗರ

ದಿ. ರತ್ನಮ್ಮ ಮಾಧವ್ ರಾವ್ – ಮಾಜಿ ಶಾಸಕರು ಶಿವಮೊಗ್ಗ (ಮ್ಯಸೂರು ರಾಜ್ಯ)

ಎಸ್. ಬಂಗಾರಪ್ಪ, ಕರ್ನಾಟಕದ ಮಾಜಿ ಮುಖ್ಯಮಂತ್ರಿ

ಬಿ ಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳು,ಮಾಜಿ ಪ್ರತಿಪಕ್ಷ ನಾಯಕರು ಶಾಸಕರು.

ಕೆ ಎಸ್ ಈಶ್ವರಪ್ಪ,ಮಾಜಿ ಉಪಮಂತ್ರಿಗಳು,ಮಾಜಿ ಪ್ರತಿಪಕ್ಷ ನಾಯಕರು,

ಹೆಚ್.ಹಾಲಪ್ಪ ,ಮಾಜಿ ಮಂತ್ರಿಗಳು, ಸೊರಬದ ಶಾಸಕರು.

ಆರಗ ಜ್ನಾನೇ೦ದ್ರ,ಮಾಜಿ ಶಾಸಕರು.

ಕಾಗೋಡು ತಿಮ್ಮಪ್ಪ, ಮಾಜಿ ಮಂತ್ರಿಗಳು ಶಾಸಕರು. ಪ್ರಸ್ಥುತ ವಿಧಾನ ಸಭಾ ಅಧ್ಯಕ್ಷರು (31-5-2013)

ಎಲ್.ಟಿ.ತಿಮ್ಮಪ್ಪ ಹೆಗಡೆ ಮಾಜಿ ಶಾಸಕರು ಲಿಂಗದಹಳ್ಳಿ.

ಕೆ.ಜೆ.ಕುಮಾರ ಸ್ವಾಮಿ,ಶಿವಮೊಗ್ಗ ಗ್ರಾಮಾಂತರ ಮಾಜಿ ಶಾಸಕರು.

ಕಿಮ್ಮನೆ ರತ್ನಾಕರ್, ಶಿಕ್ಷ್ನ ಣ ಸಚಿವರು.

ಪ್ರಸನ್ನ ಕುಮಾರ್ -ಶಾಸಕರು ಶಿವಮೊಗ್ಗ

ಮಧು ಬಂಗಾರಪ್ಪ -ಶಾಸಕರು-ಸೊರಬ

ಶಾರದಾ ಪೂರ್ಯಾನಾಯಕ್ -ಶಿವಮೊಗ್ಗ ಗ್ರಾಮಾಂತರ ಶಾಸಕರು

ಅಪ್ಪಾಜಿ ಗೌಡ -ಶಾಸಕರು -ಭದ್ರಾವತಿ

ಪ್ರಮುಖ ವ್ಯಕ್ತಿಗಳು

ರಾಷ್ಟ್ರಕವಿ ಕುವೆಂಪು, ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿ ಮತ್ತು ಲೇಖಕ.

ಡಾ.ಎಸ್.ಆರ್. ರಾವ್ (ಶಿಕಾರಿಪುರ ರಂಗನಾಥ ರಾವ್) ಭಾರತದ ಹೆಸರಾಂತ ಪ್ರಾಚ್ಯ ವಸ್ತು ತಜ್ಞ

ಯು ಆರ್ ಅನಂತಮೂರ್ತಿ, ಕನ್ನಡ ಲೇಖಕರು ಹಾಗು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು

ಪಿ.ಲಂಕೇಶ್, ಲೇಖಕ-ಪತ್ರಕರ್ತರು

ನಾ. ಡಿಸೋಜ, ಸಾಹಿತಿ

ಎಮ್.ಕೆ. ಇ೦ದಿರ, ಕಾದ೦ಬರಿಕಾರ್ತಿ

ಕೆ.ವಿ.ಸುಬ್ಬಣ್ಣ, ಸಾಹಿತಿ ಮತ್ತು ನಾಟಕಕಾರ

ಜಿ. ಎಸ್. ಶಿವರುದ್ರಪ್ಪ, ಕರ್ನಾಟಕದ ರಾಷ್ಟ್ರಕವಿ

ಎನ್ ಎಸ್ ಲಕ್ಷ್ಮಿನಾರಾಯಣ ಭಟ್ಟ, ಪ್ರಸಿದ್ದ ಕವಿ

ಗಿರೀಶ್ ಕಾಸರವಳ್ಳಿ, ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ

ಡಾ.ಟಿ.ಎಂ.ಶಿವಾನಂದಯ್ಯ ಹಿರಿಯ ಆಯುರ್ವೇದ ವೈದ್ಯರು

ಹೊ.ಅ.ನರಸಿಂಹ ಮೂರ್ತಿ ಅಯ್ಯಂಗಾರ್,ಮಾಜಿ-ರಾಜ್ಯ ರ್ಕಾರ್ಯದರ್ಶಿಗಳು,ವಿಶ್ವ ಹಿಂದೂ ಪರಿಷತ್.

ಅಭಿನಯ ಚಕ್ರವರ್ಥಿ, ಕಿಚ್ಚ ಸುದೀಪ್, ಖ್ಯಾತ ಚಲನಚಿತ್ರ ನಟ ,ದೂದ್‌ಪೇಡ : ದಿಗಂತ್ ಮುಂತಾದವರು

ಪ್ರಮುಖ ಆಕರ್ಷಣೆಗಳು
ಕುವೆಂಪು ವಿಶ್ವವಿದ್ಯಾನಿಲಯ
ಕುವೆಂಪು ವಿಶ್ವವಿದ್ಯಾನಿಲಯವು ಶಿವಮೊಗ್ಗದಿ೦ದ 27 ಕಿ.ಮಿ, ಶಿವಮೊಗ್ಗದಿಂದ ಭದ್ರಾ ಅಣೆಕಟ್ಟೈಗೆ (ಬಿ.ಆರ್.ಪಿ) ಗೆ ಹೋಗುವ ಮಾರ್ಗದಲ್ಲಿ ಶಂಕರ ಘಟ್ಟ ದಲ್ಲಿದೆ. ಅತ್ಯುತ್ತಮ ವಿದ್ಯಾ ಕೇಂದ್ರವಾಗಿ ಹೆಸರಾಗಿದೆ. ಶಿವಮೊಗ್ಗ ಜಿಲ್ಲೆಯ ಅತ್ಯಂತ ಪ್ರಸಿಧ್ಹ ಸಾಹಿತಿ ಕೆ ವಿ ಪುಟ್ಟಪ್ಪ (ಕುವೆಂಪು) ರವರ ಸ್ಮರಣಾರ್ಥ್ಹ ವಾಗಿ ಈ ವಿಶ್ವ ವಿದ್ಯಾನಿಲಯಕ್ಕೆ ಅವರ ಹೆಸರನ್ನು ಇಡಲಾಗಿದೆ.

ವಿಮಾನ ನಿಲ್ದಾಣ
ಶಿವಮೊಗ್ಗ ವಿಮಾನ ನಿಲ್ದಾಣ (ನಿದಿಗೆ ಸಮೀಪ),ಶಿವಮೊಗ್ಗ ನಗರದಿಂದ 12 ಕಿ ಮೀ ಗಳು ಮಾತ್ರ. ಆದರೆ ಇದರ ಕಾರ್ಯ ಮಂದಗತಿಯಲ್ಲಿ ಸಾಗಿದೆ ಹಾಗೂ ಪೂರ್ಣಗೊಳ್ಳುವುದೋ ಇಲ್ಲವೋ ಎಂಬ ಅನುಮಾನ ಜನರನ್ನು ಕಾಡುತ್ತಿತ್ತು. ಆದರೆ ಈಗ ಕಾರ್ಯಪ್ರಗತಿ ಅತ್ಯಂತ ವೇಗವಾಗಿದ್ದು, ಈಗಾಗಲೇ 2 ಕಿಮಿ ವೇಗದ ರನ್ ವೇ ಕಾರ್ಯ ಸಂಪೂರ್ಣಗೊಂಡಿದ್ದು, ಮೇ – ಜೂನ್ 2018 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.           P1050609 (2)ಮಲೆನಾಡಾದ ತೀರ್ಥಹಳ್ಳಿಯ ಕುರಿತು ಒಂದಿಷ್ಟು : 

ಭಾರತ ದೇಶದ ,ಕರ್ನಾಟಕ ರಾಜ್ಯದ, ಶಿವಮೊಗ್ಗ ಜಿಲ್ಲೆಯ, ತೀರ್ಥಹಳ್ಳಿ  ಯು ಪಟ್ಟಣ ಪಂಚಾಯ್ತಿಯಾಗಿದೆ . ಇದು ತುಂಗಾ ನದಿಯ ದಡದಲ್ಲಿದೆ.
 
ತೀರ್ಥಹಳ್ಳಿಯಿಂದ ಶಿವಮೊಗ್ಗವು ಸುಮಾರು 62 ಕಿಮೀ ದೂರದಲ್ಲಿದೆ.  ಶಿವಮೊಗ್ಗದಿಂದ ತೀರ್ಥಹಳ್ಳಿ ತಲುಪಲು ರಾಷ್ಟ್ರೀಯ ಹೆದ್ದಾರಿ NH-13 (ತೀರ್ಥಹಳ್ಳಿ ರಸ್ತೆ) ತೆಗೆದುಕೊಳ್ಳಬೇಕು.ತದನಂತರ ಶಿವಮೊಗ್ಗದಿಂದ  ಬೆಂಗಳೂರಿಗೆ  ತಲುಪಲು ಮೇಲೆ ತಿಳಿಸಿದ ದಾರಿಯನ್ನು ಹಿಡಿಯಲು ರಾಷ್ಟ್ರೀಯ ಹೆದ್ದಾರಿ NH-206 ತೆಗೆದುಕೊಳ್ಳಲು .  ಬೆಂಗಳೂರಿನಿಂದ ತೀರ್ಥಹಳ್ಳಿ ಒಟ್ಟು ದೂರ ಸುಮಾರು 330 ಕಿ. ಮೀ . ಮಂಗಳೂರಿನಿಂದ ತೀರ್ಥಹಳ್ಳಿ ತಲುಪಲು ರಾಷ್ಟ್ರೀಯ ಹೆದ್ದಾರಿ NH13 ತೆಗೆದುಕೊಳ್ಳಬಹುದು.ಮಂಗಳೂರಿನಿಂದ  ತೀರ್ಥಹಳ್ಳಿ ದೂರ ಸುಮಾರು 190 ಕಿ. ಮೀ
 
 ಸಮೀಪದ ರೈಲು ನಿಲ್ದಾಣವು ಶಿವಮೊಗ್ಗದಲ್ಲಿದೆ.. ಹಲವಾರು ರೈಲುಗಳು ಬೆಂಗಳೂರು ಮತ್ತು ಮೈಸೂರಿನಿಂದ ಶಿವಮೊಗ್ಗಕ್ಕೆ ಬರುತ್ತವೆ ಮತ್ತು ಹೋಗುತ್ತವೆ.
 
 ಹತ್ತಿರದ ವಿಮಾನ ನಿಲ್ದಾಣ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ .
 
ಹಿಂದೂ ಪುರಾಣದ ಪ್ರಕಾರ, ಮುನಿ ಪರಶುರಾಮನು  ತನ್ನ ತಂದೆ, ಮಹರ್ಷಿ ಜಮದಗ್ನಿ ಆದೇಶದಂತೆ ತನ್ನ ತಾಯಿ ರೇಣುಕಾದೇವಿಯವರ ತಲೆಯನ್ನು ಕೊಡಲಿಯಿಂದ ಕತ್ತರಿಸಿ,. ನಂತರ, ಪರಶುರಾಮ ವಿವಿಧ ನದಿಗಳಲ್ಲಿ   ಕೊಡಲಿಗಂಟಿದ  ಕಲೆಗಳನ್ನು ತೊಳೆಯಲು ಯತ್ನಿಸಿದ , ಪ್ರಯತ್ನಿಸಿದ. ತನ್ನ ಅತ್ಯುತ್ತಮ ಪ್ರಯತ್ನಗಳಿಂದಲೂ, ಒಂದು ಎಳ್ಳು ಗಾತ್ರದ ರಕ್ತದ ಕಲೆಯೂ ಕೂಡ ತನ್ನ ಕೊಡಲಿಯಿಂದ ತೆಗೆಯಲಾಗಲಿಲ್ಲ. ಪರಶುರಾಮನು ಎಲ್ಲೆಲ್ಲೋ ಅಲೆದು,ನಂತರ ಅವರು ತೀರ್ಥಹಳ್ಳಿಯ  ಬಳಿ ತುಂಗಾ ನದಿಯಲ್ಲಿ ತನ್ನ ಕೊಡಲಿಯನ್ನು ತೊಳೆದಾಗ ಕೊಡಲಿ ಸ್ವಚ್ಛವಾಯಿತು,ಅಂದಿನಿಂದ  ಈ ಸ್ಥಳಕ್ಕೆ ಈಗ ಪರಶುರಾಮ ತೀರ್ಥಗಳು (ಅಥವಾ ರಾಮತೀರ್ಥ) ಎಂದೂ ಕರೆಯಲಾಗುತ್ತದೆ . ತೀರ್ಥಹಳ್ಳಿಯ ಮೂಲದ ಇದೆ. ರಾಮತೀರ್ಥ ಬಳಿ, ‘ರಾಮ ಮಂಟಪ’ ಎಂಬ ಕಲ್ಲಿನ ಮಂಟಪವಿದ್ದು . ಈ ದಂತಕಥೆಯ ತಿಳಿದವರೆಲ್ಲರೂ . ತೀರ್ಥಹಳ್ಳಿಯ ನದಿಯಲ್ಲಿ  ತುಂಗಾ ಸ್ನಾನ ಮಾಡಿದರೆ ಎಲ್ಲಾ ಪಾಪಗಳು ಪರಿಹಾರವಾಗುತ್ತದೆಂಬೋ ಎಂಬ  ನಂಬಿಕೆಯೊಂದಿಗೆ ಇಲ್ಲಿಗೆ ಸಾಗರೋಪಾದಿಯಾಗಿ ಬರುತ್ತಾರೆ. ಹಿಂದೂಗಳಿಗೆ ಪವಿತ್ರ ಸ್ಥಳವಾಗಿದೆ .
ಇತಿಹಾಸಕ್ಕೆ ಸಂಬಂಧಿಸಿದಂತೆ ಇನ್ನೊಂದು ದಂತಕತೆಯಿದೆ  ,ರಾವಣನು ಸೀತೆಯನ್ನು ಮೋಡಿ ಮಾಡಿ ಅಪಹರಿಸುವ ಸಲುವಾಗಿ ,ಮಾರೀಚನೆಂಬ ರಾಕ್ಷಸನು ಚಿನ್ನದ ವರ್ಣದ ಜಿಂಕೆಯ ರೂಪ ತಾಳಿ ಆಶ್ರಮದ ಸುತ್ತಲೆಲ್ಲಾಓಡಾಡುತಿರಲು  ಸೀತೆಯು ಅದನ್ನು ಕಂಡು ,ಸೀತೆಯು ರಾಮನಿಗೆ , ಆ ಜಿಂಕೆಯು  ಜೀವಂತವಾಗಿ ಅಥವಾ ಅಜೀವವಾಗಿಯಾದರೂ ನನಗೆ ತಂದು ಕೊಡಿ ಎಂದು ಹಟ ಹಿಡಿದಾಗ , ರಾಮನು ಬೆನ್ನಟ್ಟಿ ಹೋಗಿ ಬಾಣ ಬಿಟ್ಟಾಗ, ಆ ಜಿಂಕೆಯು ನರಳುತ್ತಾ ರಾಕ್ಷಸ ರೂಪ ತಾಳಿ ಪ್ರಾಣ ಬಿಟ್ಟಾಗ, ಅವ್ನಿಂದ ಮೂಡಿದ ಲಿಂಗವನ್ನು ಶ್ರೀರಾಮನು ಅಲ್ಲಿಯೇ ಪ್ರತಿಷ್ಟಾಪಿಸಿದ್ದಾಗಿದೆ ಎಂದು ಉಲ್ಲೇಖವಿದೆ  ಸೂಚಿಸುತ್ತದೆ.
 ಈ ಘಟನೆ  ತೀರ್ಥಹಳ್ಳಿ ತಾಲೂಕಿನ ‘ ಮೃಗಾವಧೆಯೆಂಬಲ್ಲಿ ‘ ನಡೆದಿರುವುದರಿಂದ ಸ್ಥಳೀಯ ಭಾಷೆಯ ಪ್ರಕಾರ , ಮೃಘವನ್ನು ವಧೆ ಮಾಡಿದ್ದರಿಂದ ,ಈ ಸ್ಥಳ ಮೃಗವಧೆ ಎಂದು ಹೆಸರಾಯಿತು . 
 
ಭೌಗೋಳಿಕವಾಗಿ ತೀರ್ಥಹಳ್ಳಿಯು  13.7 ° N 75,23 ° ಇ ನಲ್ಲಿ ಇದೆ. [1] ಇದು 591 ಮೀಟರ್ (1938 ಅಡಿ) ಸರಾಸರಿ ಉನ್ನತಿಯನ್ನು ಹೊಂದಿದೆ. 
 
ತೀರ್ಥಹಳ್ಳಿಯ ಪಟ್ಟಣದ ಹೊರಗಿನ  ಕುರುವಳ್ಳಿ  ಎಂಬೀ ಸ್ಥಳಕ್ಕೆ ಕೂಡುವಂತೆ ಮಾಡುವ ತುಂಗಾ ನಡಿಗೆ ಅಡ್ಡಲಾಗಿ ಕಟ್ಟಿರುವ  ಸೇತುವೆಯು ಮನಮೋಹಕ. ಹಾಗೆ ರಾಮೇಶ್ವರ ದೇವಾಲಯವು  ಪರಶುರಾಮ ತೀರ್ಥಕ್ಕೆ  ಸಮೀಪದಲ್ಲಿದೆ. ದೇವಾಲಯದ ಗರ್ಭಗುಡಿ ಮುನಿ  ಪರಶುರಾಮ ಸ್ವತಃ ಅಳವಡಿಸಿದ್ದೆಂದು ಹೇಳಲಾಗಿದೆ  ಆ ದಿನ ಪರಶುರಾಮ ಎಳ್ಳು ಗಾತ್ರದ ರಕ್ತದ ಕಲೆ ತೆಗೆಯಲು ತನ್ನ ಕೊಡಲಿಯನ್ನು ಶುದ್ಧ ಮಾಡಿದ್ದಂದು ; ಹಿಂದೂ ಕ್ಯಾಲೆಂಡರ್ ಪ್ರಕಾರವಾಗಿ ಅಂದು ಅಮಾವಾಸ್ಯೆಯಾಗಿತ್ತು .ಆ  ನಿರ್ದಿಷ್ಟ ದಿನ ‘ಎಳ್ಳು ಅಮಾವಾಸ್ಯೆ’ ದಿನವೆಂದು  (ಸ್ಯೆ ಹುಣ್ಣಿಮೆ ದಿನ ಅರ್ಥ)  ತೀರ್ಥಹಳ್ಳಿಯಲ್ಲಿ ಅದ್ಧೂರಿಯಾಗಿ ಪ್ರತಿವರ್ಷ ನಡೆಯುತ್ತದೆ
ತೀರ್ಥಹಳ್ಳಿಯಿಂದ ೧೮ ಕಿಮೀ ದೂರದಲ್ಲಿರುವ ಕುಪ್ಪಳ್ಳಿಯ ಮಹಾನ್ ‘ಮಲೆನಾಡ ಕವಿ’ – ಕುವೆಂಪು(ಕುಪ್ಪಳ್ಳಿ ವೆಂಕಟಪ್ಪನವರ ಮಗ ಪುಟ್ಟಪ್ಪ)ರವರ ನಿವಾಸವಿದ್ದೂ, ಇವರು ಕವಿ,ನಾಟಕಕಾರ ,ವಿಚಾರವಾದಿ.
ಹಾಗೂ ಇವರ ನಿವಾಸದ ಸಮೀಪದಲ್ಲೇ ಕವಿಶೈಲವಿದ್ದೂ ರಮ್ಯರಮಣೀಯವಾಗಿದೆ .
ಶ್ರೀ. ಪೂರ್ಣಚಂದ್ರ ತೇಜಸ್ವಿ: ಕುವೆಂಪು ಮಗ  ಮತ್ತು ಸ್ವತಃ. ಪ್ರಸಿದ್ಧ ಕನ್ನಡದ ಲೇಖಕ .
ಟೀವಿ ಧಾರಾವಾಹಿ ಮಾಲ್ಗುಡಿ ಡೇಸ್ (ಪ್ರಸಿದ್ಧ ಲೇಖಕ ಬರೆದ ಇದೇ ಹೆಸರಿನ ಕಾದಂಬರಿ ಆಧಾರಿತ, ಆರ್.ಕೆ.ಲಕ್ಷ್ಮಣ್) ಗುಂಡೇಟಿಗೀಡಾದ ಸ್ಥಳ ಎಂಬ ಖ್ಯಾತಿ ತೀರ್ಥಹಳ್ಳಿ ತಾಲೂಕಿನ ಒಂದು ಸಣ್ಣ ಪಟ್ಟಣ. ಈ ನಗರವು ಪಶ್ಚಿಮ ಘಟ್ಟಗಳ ಕಣಿವೆಗಳಲ್ಲಿ ಒಂದು ಸುಂದರ ಪ್ರದೇಶ .  ಸೂರ್ಯಾಸ್ತ ನೋಡಲು ಬರುವ ಪ್ರವಾಸಿಗರನ್ನು ಆಕರ್ಷಿಸುತ್ತದೆ .. ಸ್ಪಷ್ಟ ದಿನ, ಅರಬ್ಬೀ ಸಮುದ್ರ ಇಲ್ಲಿ ನೋಡಬಹುದು.
ತುಂಗಾ ನದಿಯ ಮೀನುಗಳು ಬಹಳಷ್ಟು ಹೊಂದಿರುವ ಶ್ರೀ ಸಿದ್ದಿ ವಿನಾಯಕ ಚಿಬ್ಬಲುಗುಡ್ಡೆಯ ಮತ್ಸ್ಯಧಾಮ , ಪ್ರಸಿದ್ಧ ದೇವಸ್ಥಾನ. ಚಿಬ್ಬಲುಗುಡ್ಡೆಯು  ತೀರ್ಥಹಳ್ಳಿಯಿಂದ10 ಕಿಮೀ ಅಂತರದಲ್ಲಿ  ಇದೆ . ಮತ್ತು ಕುಪ್ಪಳ್ಳಿ ಸಹ  .
ತೀರ್ಥಹಳ್ಳಿ ತಾಲ್ಲೂಕಿನ ಇಬ್ಬರು ವ್ಯಕ್ತಿಗಳ ಅನನ್ಯ ದಾಖಲೆ ,ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ  ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಿರುವವರಾಗಿದ್ದಾರೆ.  ಗಮನಾರ್ಹರಾಗಿ ಕುವೆಂಪು ಹಾಗೂ ಯು ಆರ್ .ಅನಂತಮೂರ್ತಿ .
ತೀರ್ಥಹಳ್ಳಿ ಸಂಬಂಧಿಸಿದ ಇತರ ಗಮನಾರ್ಹ ವ್ಯಕ್ತಿಗಳು
ಶ್ರೀ. ಪ್ರಜಾವಾಣಿ ಮಾಜಿ ಸಂಪಾದಕ, ಒಂದು ಪ್ರಸಿದ್ಧ ವಾರ್ತಾ ಪತ್ರಿಕೆ : (ಜನಪ್ರಿಯವಾಗಿ  ಟಿಎಸ್ಆರ್  ಎಂದು ಕರೆಯಲಾಗುತ್ತದೆ) ಟಿಎಸ್ ರಾಮಚಂದ್ರ ರಾವ್
ಶ್ರೀಮತಿ. ಎಂ ಕೆ ಇಂದಿರಾ: ಕನ್ನಡ ಜನಪ್ರಿಯ ಕಾದಂಬರಿಕಾರ್ತಿ
ಶ್ರೀ. ಎಸ್ ವಿ ಪರಮೇಶ್ವರ ಭಟ್ಟ: ಜನಪ್ರಿಯ ಕನ್ನಡ ಬರಹಗಾರ
ನ್ಯಾಯಮೂರ್ತಿ. ಎಂ ರಾಮ ಜೋಯ್ಸ್: ಜನಪ್ರಿಯ ನ್ಯಾಯಾಧೀಶರು; ಭಾರತ ಜಾರ್ಖಂಡ್ ರಾಜ್ಯದ ಮಾಜಿ ಗವರ್ನರ್ ಮತ್ತು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದರು.
ಶ್ರೀ. ಗಿರೀಶ್ ಕಾಸರವಳ್ಳಿ: ತನ್ನ ಹೆಸರ ವಿರುದ್ಧ  ನಾಲ್ಕು ಗೋಲ್ಡನ್ ಲೋಟಸ್ ಪ್ರಶಸ್ತಿಗಳನ್ನು ಒಂದು ಪ್ರಸಿದ್ಧ ಕನ್ನಡ ಚಲನಚಿತ್ರ ನಿರ್ದೇಶಕ.

  • ಎಲ್ಲ ನುಡಿಗಳೂ ಪ್ರಥಮ ದರ್ಜೆಯವೇ, ಅವುಗಳಲ್ಲಿ ಮೇಲು-ಕೀಳಿಲ್ಲ

 

‘ಸಂಸ್ಕೃತದ ಜ್ಞಾನವಿಲ್ಲದೆ ಕನ್ನಡದಲ್ಲಿ ಪ್ರಥಮ ದರ್ಜೆಯ ಸಾಹಿತ್ಯ ರಚಿಸಲು ಅಸಾಧ್ಯ’ ಎಂಬಂತಹ ಮಾತುಗಳನ್ನು ಶ್ರೀ ಎಸ್. ಎಲ್. ಭೈರಪ್ಪನವರು, ಮೊನ್ನೆ ಮೈಸೂರಿನಲ್ಲಿ ‘ಸಂಸ್ಕೃತ ಭಾರತಿ’ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಆಡಿದ್ದಾರೆ. ಇಂತಹ ಮಾತುಗಳನ್ನು ಅವರು ಈ ಮೊದಲೂ ಹಲವು ಸಾರಿ ಹೇಳಿದ್ದಾರೆ. ಆದರೆ ಇಂತಹ ಮಾತುಗಳು ಸಂಸ್ಕೃತದ ಮೇಲಿನ ಕುರುಡು ಅಭಿಮಾನದ ಮೇಲೆ ನಿಂತಿವೆಯೇ ಹೊರತು ಇವಕ್ಕೆ ಯಾವುದೇ ವೈಜ್ಞಾನಿಕ ನಿಲುವಿಲ್ಲ.

ಲ್ಯಾಟಿನ್, ಗ್ರೀಕ್, ಅರೇಬಿಕ್, ಪರ್ಶಿಯನ್ ಮುಂತಾದ ಜಗತ್ತಿನ ಬೇರೆ ಬೇರೆ ಭಾಷೆಗಳು, ಬೇರೆ ಬೇರೆ ಕಾಲಘಟ್ಟಗಳಲ್ಲಿ ಸಾಹಿತ್ಯ, ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಮೇಲುಮಟ್ಟ ತಲುಪಿದ್ದವು. ಆಧುನಿಕ ಯುಗದಲ್ಲಿ ಇಂಗ್ಲಿಶ್, ಇಟಾಲಿಯನ್, ಜರ್ಮನ್, ಫ್ರೆಂಚ್, ಜಾಪನೀಸ್, ಕೊರಿಯನ್ ಮುಂತಾದ ಭಾಷೆಗಳು ಸಾಹಿತ್ಯ, ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಬಹಳಷ್ಟು ಮುಂದಿವೆ. ಇವು ಯಾವಕ್ಕೂ ಬೆಳೆಯಲು, ಪ್ರಥಮ ದರ್ಜೆಯ ಸಾಹಿತ್ಯವನ್ನು ರಚಿಸಲು ಮತ್ತು ಆ ಮೂಲಕ ಮೇಲುಮಟ್ಟವನ್ನು ತಲುಪಲು ಸಂಸ್ಕೃತದ ಅವಶ್ಯಕತೆ ಬಿದ್ದಿಲ್ಲ.

ಕನ್ನಡವನ್ನೇ ತೆಗೆದುಕೊಂಡರೆ, ಈ ನಮ್ಮ ನುಡಿಯನ್ನು ಸುಮಾರು 2000 ವರುಶಗಳ ಹಿಂದೆ ಬರಹಕ್ಕೆ ಇಳಿಸಲಾಯಿತು ಎಂದು ಹೇಳಬಹುದು. ಮೊದಮೊದಲು ಹೀಗೆ ಮೂಡಿ ಬಂದ ಕನ್ನಡ ಬರಹವು, ಸಂಸ್ಕೃತ ಪದಗಳಿಂದ ಮತ್ತು ಸಂಸ್ಕೃತ ಕಾವ್ಯ ಪರಂಪರೆಯಿಂದ ಹೆಚ್ಚು ಪ್ರಭಾವಿತವಾಗಿತ್ತೆಂಬುದೇನೋ ನಿಜ. ಆದರೆ ಅದಕ್ಕೂ ಹಲವು ಸಾವಿರ ವರುಶಗಳಿಂದ ಆಡುಮಾತಾಗಿ ಸಮೃದ್ಧವಾಗಿ ಬೆಳೆದು ಬಂದ ಈ ನುಡಿಗೆ ಸಂಸ್ಕೃತದ ನೆರವು ಬೇಕಿರಲಿಲ್ಲ. ಕನ್ನಡ-ಸಂಸ್ಕೃತಗಳೆರಡೂ ಹುಟ್ಟು ಮತ್ತು ಬೆಳವಣಿಗೆಯಲ್ಲಿ ಒಂದಕ್ಕೊಂದು ನಂಟು ಹೊಂದಿದ್ದ ನುಡಿಗಳಲ್ಲ ಎಂಬುದನ್ನು ಭಾಷಾ ವಿಜ್ಞಾನವು ಹೇಳುತ್ತದೆ. ಹಾಗಾಗಿ ಭಾಷಾವಿಜ್ಞಾನದಲ್ಲಿ ಇವುಗಳನ್ನು ಬೇರೆ ಬೇರೆ ನುಡಿಕುಟುಂಬಗಳಲ್ಲಿ ವಿಂಗಡಿಸಲಾಗಿದೆ (ದ್ರಾವಿಡ – ಇಂಡೋ ಆರ್ಯನ್).

ಇನ್ನು ಸಾಹಿತ್ಯದ ವಿಚಾರಕ್ಕೆ ಬಂದರೆ, ಕನ್ನಡದಲ್ಲಿ ಕಾವ್ಯಪರಂಪರೆ ಹುಟ್ಟುವಷ್ಟರಲ್ಲಿ ಸಂಸ್ಕೃತದ ಕಾವ್ಯಪರಂಪರೆ ಆಗಲೇ ಸಾಕಷ್ಟು ಬೆಳೆದಿತ್ತು. ಹಾಗಾಗಿ ಕನ್ನಡದ ಕವಿಗಳು ಆ ಪರಂಪರೆಯಿಂದ ಸಾಕಷ್ಟು ಪ್ರಭಾವಿತರಾಗಿದ್ದರಿಂದ ಕನ್ನಡ ಕಾವ್ಯಗಳಲ್ಲಿ ಸಂಸ್ಕೃತದ ಪ್ರಭಾವ ಹೆಚ್ಚಾಗಿ ಕಾಣಸಿಗುತ್ತದೆ. ಸಂಸ್ಕೃತದ ಬದಲಾಗಿ ಬೇರೆ ನುಡಿಯ ಒಂದು ಸಾಹಿತ್ಯ ಪರಂಪರೆ ಭಾರತದಲ್ಲಿ ಗಟ್ಟಿಯಾಗಿ ನೆಲೆಯೂರಿದ್ದರೆ, ಸಂಸ್ಕೃತದ ಬದಲಾಗಿ ಆ ನುಡಿಯ ಪ್ರಭಾವವು ಕನ್ನಡ ಸಾಹಿತ್ಯದ ಮೇಲೆ ಆಗುತ್ತಿತ್ತು. ಉದಾಹರಣೆಗೆ, ಯೂರೋಪಿನ ಹಲವು ನುಡಿಗಳ ಸಾಹಿತ್ಯದ ಮೇಲೆ ಲ್ಯಾಟಿನ್ ಸಾಹಿತ್ಯದ ಪರಿಣಾಮವಾಗಿದೆಯೇ ಹೊರತು ಸಂಸ್ಕೃತ ಸಾಹಿತ್ಯದ ಪ್ರಭಾವವಾಗಿಲ್ಲ. ಇದಕ್ಕೆ ಅಂದಿನ ದಿನಗಳಲ್ಲಿನ ಭೌಗೋಳಿಕ, ಸಾಂಸ್ಕೃತಿಕ, ವ್ಯಾವಹಾರಿಕ ಮತ್ತು ರಾಜಕೀಯ ಕಾರಣಗಳಿವೆ. ಹಾಗಾಗಿ, ಕನ್ನಡದ ಸಾಹಿತ್ಯದ ಮೇಲೆ ಸಂಸ್ಕೃತ ಸಾಹಿತ್ಯದ ಪರಿಣಾಮವನ್ನೂ ಅಂದಿನ ಭೌಗೋಳಿಕ, ಸಾಂಸ್ಕೃತಿಕ, ವ್ಯಾವಹಾರಿಕ ಮತ್ತು ರಾಜಕೀಯ ಪ್ರಭಾವಗಳ ನೆಲೆಗಳಲ್ಲಿ ನೋಡಬೇಕೇ ಹೊರತು ಸಂಸ್ಕೃತವಿಲ್ಲದೆ ಕನ್ನಡಕ್ಕೆ ಸಾಮರ್ಥ್ಯವೇ ಇಲ್ಲ ಎಂದು ಬಗೆಯುವುದು ತಪ್ಪಾದೀತು.

ಸುಮಾರು ಹನ್ನೆರಡನೆಯ ಶತಮಾನದಲ್ಲಿ ಸಂಸ್ಕೃತದ ಕಾವ್ಯ ಪರಂಪರೆಯನ್ನು ಬಿಟ್ಟು ಕನ್ನಡದ್ದೇ ನೆಲೆಯಲ್ಲಿ ರಚಿತವಾದ ವಚನ ಸಾಹಿತ್ಯವನ್ನು ಪ್ರಥಮ ದರ್ಜೆಯ ಸಾಹಿತ್ಯವಲ್ಲ ಎಂದು ಹೇಳಲು ಸಾಧ್ಯವೇ? ಹಲವರು ವಚನ ಸಾಹಿತ್ಯವನ್ನು ಕನ್ನಡದ ಉಪನಿಷತ್ತುಗಳು ಎಂದು ಬಣ್ಣಿಸಿದ್ದಾರೆ. ಕನ್ನಡದಲ್ಲಿ ಹಲವು ಜಾನಪದ ಕಾವ್ಯಗಳು, ಮಹಾಕಾವ್ಯಗಳು ಇವೆ. ಇವು ಯಾವುವೂ ಸಂಸ್ಕೃತದ ‘ಶಿಷ್ಟ’ ಪರಂಪರೆಯಲ್ಲಿ ಹುಟ್ಟಿ ಬಂದವಲ್ಲ. ಹಾಗೆಂದ ಮಾತ್ರಕ್ಕೆ ಇವು ಪ್ರಥಮ ದರ್ಜೆಯವಲ್ಲ ಎಂದು ಜರಿಯಲು ಸಾಧ್ಯವೇ?

ವೈಜ್ಞಾನಿಕವಾಗಿ ನೋಡಿದರೆ ಒಂದು ನುಡಿಯಲ್ಲಿ ಹೇಳಲು ಬರುವ ಯಾವುದೇ ವಿಷಯವನ್ನು, ಬೇರೊಂದು ನುಡಿಯಲ್ಲೂ ಹೇಳಬಹುದು. ಆದರೆ ಹೇಳುವ ಬಗೆಗಳು ಬೇರೆ ಬೇರೆ ನುಡಿಗಳಲ್ಲಿ ಬೇರೆ ಬೇರೆಯಾಗಿರುತ್ತವೆ. ಹೀಗೆ ವೈಜ್ಞಾನಿಕ  ನೆಲೆಯಲ್ಲಿ ನೋಡಿದಾಗ ಶಿಷ್ಟ ಭಾಷೆಗಳು ಎನಿಸಿಕೊಂಡ ‘ಲ್ಯಾಟಿನ್’, ಸಂಸ್ಕೃತ’, ‘ಗ್ರೀಕ್’, ‘ಪರ್ಶಿಯನ್’ ಮುಂತಾದ ನುಡಿಗಳಿಗೂ ಬುಡಕಟ್ಟು ಜನರು ಆಡುವ ನುಡಿಗಳಿಗೂ ಯಾವುದೇ ವ್ಯತ್ಯಾಸಗಳಿಲ್ಲ. ಲ್ಯಾಟಿನ್ ನುಡಿಯಲ್ಲಿ ಹೇಳಬಹುದಾದ ವಿಷಯವನ್ನು ಆಫ್ರಿಕಾದ ಬುಡಕಟ್ಟು ನುಡಿಯಾದ ಕೋಸ (Xhosa) ನುಡಿಯಲ್ಲೂ ಹೇಳಬಹುದು. ಇನ್ನು ಲ್ಯಾಟಿನ್ ನುಡಿಗೆ ಇರುವ ಸೊಬಗು ಕೋಸ ನುಡಿಗೆ ಇದೆಯೇ ಎಂಬ ಪ್ರಶ್ನೆಗೆ, ಲ್ಯಾಟಿನ್ ನುಡಿಯ ಸೊಬಗು ಮತ್ತು ಕೋಸ ನುಡಿಯ ಸೊಬಗು ಎರಡೂ ಬೇರೆ ಬೇರೆ ಬಗೆಯವು ಎಂದು ಹೇಳಬೇಕಾಗುತ್ತದೆ. ಒಂದು ಹೆಚ್ಚು ಇನ್ನೊಂದು ಕಡಿಮೆ ಎಂದು ಹೇಳಲು ಬರುವುದಿಲ್ಲ.

ಸಂಸ್ಕೃತವಿಲ್ಲದಿದ್ದರೆ ಪ್ರಥಮ ದರ್ಜೆ ಸಾಹಿತ್ಯ ರಚಿಸಲು ಅಸಾಧ್ಯ ಎಂಬಂತಹ ಅಭಿಪ್ರಾಯವು ಈ ಮೇಲಿನ ವಿಷಯವನ್ನು ಸರಿಯಾಗಿ ಅರಿಯದ ಕಾರಣ ಹುಟ್ಟಿರುವಂತಹುದು. ಸಂಸ್ಕೃತದ ಸೊಬಗೇ ಬೇರೆ, ಕನ್ನಡದ ಸೊಬಗೇ ಬೇರೆ, ಒಂದು ಮೇಲು ಇನ್ನೊಂದು ಕೀಳು ಎಂಬುದಿಲ್ಲ, ಎಂಬ ವಿಷಯವನ್ನು ಮನಗಂಡರೆ ಇಂತಹ ಗೊಂದಲಗಳು ಆಗುವುದಿಲ್ಲ. ಆದರೆ ಮೊದಲೇ ಸಂಸ್ಕೃತವು ಮೇಲು ದರ್ಜೆಯದು ಎಂದು ತೀರ್ಮಾನಿಸಿಕೊಂಡರೆ, ಕನ್ನಡದ ಸೊಬಗನ್ನು ಕನ್ನಡದ ನೆಲೆಯಲ್ಲಿ ನೋಡದೆ ಸಂಸ್ಕೃತದ ನೆಲೆಯಲ್ಲಿ ಕಂಡಾಗ, ಇಂತಹ ಅಭಿಪ್ರಾಯಗಳು ಹುಟ್ಟಿಕೊಳ್ಳುತ್ತವೆ. ಇಂತಹ ಅಭಿಪ್ರಾಯಗಳು ಸುಳ್ಳು ಎಂಬುದನ್ನು ವಚನ ಸಾಹಿತ್ಯವು ನಮಗೆ ತೋರಿಸಿಕೊಟ್ಟಿದೆ. ಅಲ್ಲದೆ 12ನೆಯ ಶತಮಾನದಲ್ಲೇ ಸಂಸ್ಕೃತದ ಪದಗಳನ್ನು ಬಳಸದೆಯೇ ಕನ್ನಡ ಕಾವ್ಯವನ್ನು ರಚಿಸಬಹುದು ಎಂಬುದನ್ನು ಆಂಡಯ್ಯ ಎಂಬ ಕವಿ ‘ಕಬ್ಬಿಗರ ಕಾವಂ’ ಎಂಬ ಕಾವ್ಯದ ಮೂಲಕ ತೋರಿಸಿ ಕೊಟ್ಟಿದ್ದಾನೆ. ಕೊಳಂಬೆ ಪುಟ್ಟಣ್ಣ ಗೌಡರು ಕನ್ನಡದ್ದೇ ಪದಗಳನ್ನು ಬಳಸಿ ಬರೆದಿರುವ ‘ಕಾಲೂರ ಚೆಲುವೆ’ ಮತ್ತು ‘ಅಚ್ಚಗನ್ನಡ ನುಡಿವಣಿಗಳು’ ಕನ್ನಡತನದ ಸೊಬಗನ್ನು ಎತ್ತಿ ಹಿಡಿದಿವೆ.

ಸಂಸ್ಕೃತವೂ ಸೇರಿದಂತೆ ಬೇರೆ ನುಡಿಗಳಿಂದ ಪದಗಳನ್ನು ಪಡೆಯುವುದು, ಮತ್ತು ಬೇರೆ ನುಡಿಗಳ ಪ್ರಭಾವಗಳನ್ನು ಮೈಗೂಡಿಸಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಸಂಸ್ಕೃತವಿಲ್ಲದೆ ಕನ್ನಡವು ಅಭಿವ್ಯಕ್ತಿ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ, ಮತ್ತು ಪ್ರಥಮ ದರ್ಜೆಯ ಕೃತಿಗಳಿಗೆ ಸಂಸ್ಕೃತ ಅಗತ್ಯ ಎಂಬಂತಹ ಮಾತುಗಳು ಸತ್ಯಕ್ಕೆ ದೂರವಾದವು.

ಇದಲ್ಲದೆ ‘ಮರಾಠಿ, ಹಿಂದಿಯಲ್ಲಿ ಕೃತಿಯೊಂದು ಪ್ರಕಟವಾದರೆ ಕನ್ನಡಿಗರಿಗೆ ಗೊತ್ತಾಗುವುದು ಹೇಗೆ? ಇದಕ್ಕಾಗಿ ಸಾಮಾನ್ಯ ಶಬ್ದ ಭಂಡಾರ ಬೇಕಿದೆ’ ಎಂದು ಹೇಳುವ ಮೂಲಕ ಶ್ರೀ ಭೈರಪ್ಪನವರು ಎಲ್ಲ ಭಾರತೀಯ ಭಾಷೆಗಳೂ ಸಂಸ್ಕೃತದ ಸಾಮಾನ್ಯ ಶಬ್ದ ಭಂಡಾರವನ್ನು ಬಳಸಬೇಕು ಎಂಬ ತಮ್ಮ ಇಂಗಿತವನ್ನು ತಿಳಿಸಿದ್ದಾರೆ. ಆದರೆ ಹಲವು ಕಾರಣಗಳಿಂದಾಗಿ ಈ ವಾದಕ್ಕೂ ಯಾವುದೇ ತಾರ್ಕಿಕ ನೆಲೆಯಿಲ್ಲ. ಪ್ರತಿಯೊಂದು ನುಡಿಗೂ ತನ್ನದೇ ಆದ ಪದಭಂಡಾರ ಆಗಲೇ ಇದೆ. ಇದೆಲ್ಲವನ್ನೂ ಸಂಸ್ಕೃತದ ಪದಗಳಿಂದ ಮಾರ್ಪಡಿಸುವುದು ಸಮಂಜಸವಲ್ಲ. ಅಲ್ಲದೆ, ಎಲ್ಲ ನುಡಿಗಳೂ ಒಂದೇ ನುಡಿಕುಟುಂಬಕ್ಕೆ ಸೇರಿದವಲ್ಲ. ಹಾಗಾಗಿ ಎಲ್ಲ ಬಗೆಯ ಸಂಸ್ಕೃತ ಪದಗಳು, ಅವುಗಳ ಉಚ್ಚಾರಣೆಗಳು ಎಲ್ಲ ನುಡಿಗಳಲ್ಲಿ ಒಂದೇ ಬಗೆಯಲ್ಲಿ ಹೊಂದುತ್ತವೆಂದು ಹೇಳಲು ಬರುವುದಿಲ್ಲ. ಈ ರೀತಿಯಲ್ಲಿ ಸಂಸ್ಕೃತದ ಪದಗಳನ್ನು ತುಂಬುವುದರಿಂದ ಆಯಾ ನುಡಿಗಳ ಸೊಗಡನ್ನೂ ಕುಂದಿಸಿದಂತೆ ಆಗುತ್ತದೆ ಮತ್ತು ಸಂಸ್ಕೃತ ಬಾರದ ಓದುಗರಿಗೆ ಅಂತಹ ಸಾಹಿತ್ಯವನ್ನು ಓದಲು ತೊಡಕಾಗುತ್ತದೆ.

ಒಂದು ವೇಳೆ ಸಂಸ್ಕೃತದ ಸಾಮಾನ್ಯ ಪದ ಭಂಡಾರವನ್ನೇ ಎಲ್ಲ ನುಡಿಗಳೂ ಬಳಸಲು ತೊಡಗಿದವು ಎಂದಿಟ್ಟುಕೊಳ್ಳೋಣ. ಹಾಗೆಂದ ಮಾತ್ರಕ್ಕೆ ಬೇರೊಂದು ನುಡಿಯ ಸಾಹಿತ್ಯ ನಮಗೆ ಅರ್ಥವಾಗುತ್ತದೆಯೇ? ನಾವು ಅದನ್ನು ಓದಲು ತೊಡಗುತ್ತೇವೆಯೇ? ಒಂದು ನುಡಿಗೆ ಅದರದೇ ಆದ ವಾಕ್ಯ ರಚನೆ, ಕ್ರಿಯಾ ಪದಗಳು, ಹೇಳುವ ಬಗೆಗಳು ಇರುತ್ತವೆ. ಒಂದೇ ಪದಸಂಪತ್ತು ಇದ್ದರೂ ಬೇರೆ ನುಡಿಯನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಲ್ಲದ ಮಾತು. ಹಾಗಾಗಿ ಮರಾಠಿ, ಹಿಂದಿ ನುಡಿಗಳಲ್ಲಿ ಎಷ್ಟೇ ಸಾಮಾನ್ಯ ಪದಸಂಪತ್ತಿರಲಿ ಅವನ್ನು ಹಲವಾರು ವರುಶಗಳ ಕಾಲ ಸರಿಯಾಗಿ ಕಲಿಯದೇ ಅವುಗಳ ಸಾಹಿತ್ಯವನ್ನು ಓದಲು ಆಗುವುದಿಲ್ಲ.

ಆದರೆ ಬೇರೆ ನುಡಿಯಲ್ಲಿ ಹುಟ್ಟುವ ಸಾಹಿತ್ಯವನ್ನು ಅನುಭವಿಸಲು ಇದಕ್ಕೂ ಒಂದು ಸುಲಭವಾದ ಉಪಾಯವಿದೆ: ಭಾಷಾಂತರ. ಭೈರಪ್ಪನವರ ಕೃತಿಗಳೇ ಹಲವು ನುಡಿಗಳಿಗೆ ಭಾಷಾಂತರಗೊಂಡಿವೆ. ಹಾಗಾಗಿ ಎಲ್ಲ ನುಡಿಗಳಿಗೂ ಸಂಸ್ಕೃತ ನುಡಿಯ ತಳಪಾಯದಲ್ಲಿ ಒಂದು ಸಾಮಾನ್ಯ ಪದ ಭಂಡಾರವನ್ನು ಕಟ್ಟಲು ಹೊರಡುವುದು ವ್ಯರ್ಥ ಪ್ರಯತ್ನ. ಸಾಹಿತ್ಯ ರಚನೆಗೆ ಯಾವ ಪದಗಳು ಆರಿಸಿಕೊಳ್ಳಬೇಕು ಎಂಬುದನ್ನು ಸಾಹಿತ್ಯ ರಚಿಸುವವರಿಗೆ ಬಿಡುವುದು ಒಳ್ಳೆಯದು.

ಸಂಸ್ಕೃತದಲ್ಲಿ ಉತ್ತಮವಾದ ಸಾಹಿತ್ಯವಿದೆ, ಅಪಾರವಾದ ಜ್ಞಾನ ಭಂಡಾರವಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಸಂಸ್ಕೃತ ನುಡಿಯನ್ನೂ ಅದರ ಸಾಹಿತ್ಯ ಪರಂಪರೆಯನ್ನೂ ಹೆಚ್ಚು ಹೆಚ್ಚು ಜನರಿಗೆ ಮುಟ್ಟುವಂತೆ ಮಾಡಿ, ಅವನ್ನು ಕಲಿಯವವರಿಗೆ ಹೆಚ್ಚಿನ ಉತ್ತೇಜನವನ್ನು ನೀಡುವಲ್ಲಿ ಯಾವುದೇ ತಪ್ಪಿಲ್ಲ. ಆದರೆ ಸಂಸ್ಕೃತವಿಲ್ಲದೆ ಕನ್ನಡದಲ್ಲಿ ಪ್ರಥಮ ದರ್ಜೆಯ ಸಾಹಿತ್ಯ ರಚಿಸಲು ಸಾಧ್ಯವೇ ಇಲ್ಲ, ಸಂಸ್ಕೃತವಿಲ್ಲದೆ ಕನ್ನಡವು ಅಭಿವ್ಯಕ್ತಿ ಸಾಮರ್ಥ್ಯ ಕಳೆದುಕೊಳ್ಳುತ್ತದೆ ಎಂಬಂತಹ ಮಾತುಗಳು ಸತ್ಯಕ್ಕೆ ದೂರವದವು.

‘ವನಚೇತನ ‘ VanaChethana

   ‘ವನಚೇತನ ‘ನಿಸರ್ಗಧಾಮ’ – ತೀರ್ಥಹಳ್ಳಿಯಿಂದ 26ಕಿಮೀ ದೂರದಲ್ಲಿಯ ‘ಹೆದ್ದೂರು‘-ಗ್ರಾಮದಲ್ಲಿ *ಆರ್ಟ್ ಎಸ್ಟೇಟ್ಕಲಾ ನಿಕೇತನ*…   ತನ್ನ ಸ್ವಂತ ಜಮೀನಿನಲ್ಲಿ ಸ್ವಂತ ಕಲೆಯ ಪ್ರಾರಂಭಿಸಿದ ಬ್ರಹ್ಮಾಚಾರ್ಯ ಲೇಖಕ – ಶ್ರೀ ದೇವಿತೋ ನಾಗೇಶರವರು …  ಇವರ ಇಡೀ ಜೀವನವನ್ನ ಕಲಾಮಾತೆಯ ಆರಾಧನೆಯಲ್ಲೇ  ಕಳೆಯುತಿರುವ ಅವರು ಎಲ್ಲರಿಗೂ ಉಚಿತವಾಗಿ ಅವರ ಕಲಾಮಂಟಪಕ್ಕೆ ಆಹ್ವಾನವಿರಿಸಿದ್ದಾರೆ ,

ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದಲ್ಲಿ ವಿಶೇಷ ರೊಮಾಂಚನವೆನಿಸುವ ಆಟಗಳನ್ನು ತಿಳುವಳಿಕೆಯನ್ನು ನೀಡುವರು …

ಅವರಾ ಕಲಾಕುಟಿರದಲ್ಲಿ ಅನೇಕ ಬಗೆಯ ವಸ್ತು -ವೈಶಿಷ್ಟ್ಯವೆನ್ನಿಸುವ ವಸ್ತುಗಳನ್ನು ಸಂಗ್ರಹಿಸಿದ್ದು …
ನಮಗೇನೆ ವಿಚಿತ್ರವೆನಿಸುತ್ತದೆ ., ಅವರ ಅನುಭವ ಮಂಟಪವೇ ಅದು ಸರಿ …

ತಮ್ಮದೇ ಕಲಾವಂತಿಕೆಯಿಂದ –ಕುಸುರಿ, ಶಿಲ್ಪಕೆತ್ತನೆ ,ಹಾಗು ತ್ಯಾಜ್ಯ ವಸ್ತುಗಳಿಂದ , ಸೊಗಸಾದ ಚಿತ್ರಣವನ್ನೇ ಪ್ರಕೃತಿ ಮಡಿಲಿನಲ್ಲಿ ಸೃಷ್ಟಿಸಿದ್ದಾರೆ ,

ಒಮ್ಮೆ ಭೇಟಿ ನೀಡಿ ….

Create a free website or blog at WordPress.com.

Up ↑