ನಾನು ಪುಸ್ತಕಗಳನ್ನು ಓದಿದ್ದು ಬಹಳಾ ಕಡಿಮೆ , ಪೂರ್ಣವಂತೂ ಇಲ್ಲ,
ಆದರೆ ಪೂರ್ಣವಾಗಿ ಓದಿದ ಪುಸ್ತಕವೆಂದರೆ ಕುಪ್ಪಳ್ಳಿ(ಕೇ)ಪುಟ್ಟಪ್ಪನವರ (ಪಿ) ಮಗನಾದ ಪೂರ್ಣಚಂದ್ರ ತೇಜಸ್ವಿಯವರ “ಕರ್ವಾಲೊ” (ಅರ್ಥಾತ್: ಸಾಮರ್ಥ್ಯವುಳ್ಳ) ಕಾದಂಬರಿ ಆಕೃತ ಘಟನೆಗಳ ಸಾರವನ್ನು ಸಾಲು ಸಾಲುಗಳಲ್ಲಿ ನಮ್ಮನ್ನ ಹಿಡಿದಿಡುವಂತ ಸಾಮರ್ಥ್ಯಗಳುಳ್ಳ ಕಥೆಗಳು,
ಅವರ ಈ ಕಾದಂಬರಿಯ ನಿಜಸಾರ ಒಂದು ಬಗೆಯ ಮಲೆನಾಡಿನಲ್ಲಿ ಅಸಾಮಾನ್ಯವಾಗಿ ಕಂಡುಬರುವ ಓತಿಕ್ಯಾತ, ‘ಹಾರುವ ಓತಿಯ’ ಬಗೆಯ ಬಗ್ಗೆ,
.
ಅವರು ವಿವರಿಸುತ್ತಾ ಹೋಗುವಂತೆ ಜಗತ್ತಿನಲ್ಲಿ ಅತೀ ಹಿಂದೆಯೇ ಈ ಓತಿಯ ಸಂತಾನವಡಗಿದೆಯೆಂಬ ಮಹಾನ್ ವ್ಯಕ್ತಿಗಳ ಪ್ರತಿಪಾದನೆಗಳ ನಡುವೆ,
ಅವರಿಗೆ ಮಲೆನಾಡಿನ ಒಂದು ಸಣ್ಣ ಹಳ್ಳಿ , ನಮ್ಮೂರಿನಿಂದ ಬಹುಶಃ ಸರಿಸುಮಾರು ೩೫-೪೦ ಮೈಲು ನಾರ್ವೆ ಎಂಬ ಊರು, ಅಲ್ಲಿನ ಪ್ರಾಪಂಚಿಕ ಜಾಡಿನ ಹಿನ್ನೆಲೆ ಸಾಬೀತುಪಡಿಸುವ ಸಾರವನ್ನೇ ಮೈದುಂಬಿರುವ ಸಾಂಧಾರ್ಬಿಕ ಕಥನ,
ಒಬ್ಬ ಹಳ್ಳಿಯ ಮಾಮೂಲಿ ವ್ಯಕ್ತಿಯಿಂದ ತಿಳಿಯಲ್ಪಟ್ಟ ಹಾರುವ ಓತಿಯ ಕೌತುಕ,ಅದರ ಹಿಂದೆ ಬಿದ್ದು ಸಾಗುವ ನಾಗಾಲೋಟದ ಪರಿ, ಇದರ ಸಾರ;
.
ಹಾಗೆಯೇ ನಾನೇ ಕಂಡದ್ದು ಬಹುಶಃ ೭-೮ ವರ್ಷಗಳ ಹಿಂದೆ,
ನಾನೊಮ್ಮೆ ನಮ್ಮ ಮನೆಯ ಅಡಿಕೆ ತೋಟದಲ್ಲಿ ಅಡಿಕೆ ಕೊನೆ ತೆಗೆಯುವ ಸಮಯದಲ್ಲಿ ಅಡಿಕೆ ಮರದ ಕೊನೆ ರಾಶಿಯಿಂದ ಒಂದು ಓತಿಯ ಸ್ವರೂಪದ ಜೀವಿಯೊಂದು ಹಾರಿ, ಮರವೊಂದನ್ನ ಹತ್ತುತ್ತಿರುವುದನ್ನು ಅಸ್ಪಷ್ಟವಾಗಿ ಕಂಡಿದ್ದೆ, ಆವತ್ತು ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ, ತರುವಾಯ ವರುಷಗಳಲ್ಲಿ ನಾನವರ ಕಾದಂಬರಿಯನ್ನು ಓದಿದ್ದಾಗ ಅಂದು ಅರಿವಾಗಿದ್ದು, ಛೇ ಅದರ ಹಿಂದೆ ಬಿದ್ದು ನೋಡಬೇಕಿತ್ತು ಎಂದು,
.
ಈ ಹಾರುವ ಓತಿಯದ್ದು ಮಹತ್ತರ ವಿಶಿಷ್ಠತೆಗಳಂತದ್ದೇನಿಲ್ಲ, ಆದರೆ ಸಹಸ್ರ ವರುಷಗಳಿಂದ ಇದರದೊಂದು ತಳಿ ಮಾತ್ರ ,ಕಾಲುಗಳ ಬುಡದಲ್ಲಿ ಹೊಟ್ಟೆಯ ಮಧ್ಯಭಾಗದ ಇಕ್ಕೆಲಗಳಲ್ಲೂ ಬಾವಲಿಗಳಲ್ಲಿರುವಂತಹ ಪೊರೆಯ ರಚನೆ ಹೊಂದಿದ್ದು, ಮಡಚಿಕೊಂಡಾಗ ಮಾಮೂಲಿ ಓತಿಯಂತೆ ತೋರುವುದು, ಯಾವಾಗ ತನ್ನಿಚ್ಚೆ/ಅಪಾಯದ ಮುನ್ಸೂಚನೆಗಳು ಬರುತ್ತದೋ ಆಗ ಪೊರೆಯನ್ನು ಬಿಚ್ಚಿ, ಗಾಳಿಯಲ್ಲಿ ತೇಲಿಹೋಗಿ ಮತ್ತೊಂದೆಡೆ ಇಳಿಯುತ್ತದಷ್ಟೆ,
.
ಆದರೆ ಅಷ್ಟು ಯುಗಗಳಿಂದ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡುಬಂದ ಆ ಸಣ್ಣ ಜೀವಿಯು ನಮ್ಮನಿಮ್ಮೆಲ್ಲರಿಗೂ ಒಂದುಮಾದರಿಯಂತೆಯೇ ತೋರುತ್ತದೆ ನನ್ನ ಪ್ರಕಾರ :
ನಮ್ಮ ನಾಡು-ನಾಡ ಭಾಷೆ-ನಾಡ ಸಂಸ್ಕೃತಿ-ಮುಂದಿನ ಪೀಳಿಗೆಗೆ ಸಂಪದ್ಭರಿತ ಪ್ರಕೃತಿ, ಜತನದಿಂದುಳಿಸಿಕೊಂಡು ಅಸ್ಥಿತ್ವವ ಉಳಿಸಿಕೊ/ಡೋಣ/ಳ್ಳೋಣ ಎಂಬ ಅರಿವಂತೂ ಕೊಡುತ್ತದೆ, ತೆಗೆದುಕೊಳ್ಳುವ ದೊಡ್ಡತನ-ಸಣ್ಣತನ ನಮ್ಮ-ನಿಮ್ಮಲ್ಲಿದೆಯಷ್ಟೇ….🌿☺
– ಮೌನಗಮನಿ
#ಕರ್ವಾಲೋ #ಮಲೆನಾಡ_ಸೋಜಿಗ
Recent Comments