ಬದುಕಿರುವಷ್ಟು ದಿನ ಏನನ್ನೋ ಹುಡುಕಬೇಕು, ಇನ್ನೇನನ್ನೋ ಸಾಧಿಸಬೇಕು, ಮತ್ತೆಲ್ಲೇನೋ ಇರಬೇಕೆಂದೆಲ್ಲಾ, ಹಂಬಲಿಸೋ ಜೀವಕೆ, ತಾನಿರುವ ಜಾಗ ಬರೀ ಗೊಬ್ಬರದ ರಾಶಿಯಂತನಿಸುವುದು ಸಹಜ,
ನೀರು ನಿಂತಲ್ಲಿ ನಿಲ್ಲಬಾರದು ,ಹರಿಯುತಲೇ ಇರಬೇಕು, ಕಷ್ಟನಷ್ಟಗಳ ತುಂಬಿಕೊಂಡು ಬಳುಕಬೇಕು,
ಸಿದ್ಧಾಂತಗಳು ಆದರ್ಶಗಳವು, ಚೇತನಾವಸ್ಥೆಯ ಕಾಯ್ದುಕೊಳ್ಳುವ ಸ್ಥಿತಿಗಳೇ ಹೊರತು, ಬರೀ ಅವೇ ಜೀವನದ ನೀತಿಗಳಲ್ಲ,
ಒಂದಷ್ಟನ್ನ ಬಿಡಲೂಬೇಕಾಗುತ್ತದೆ, ಇನ್ನೇನನ್ನೋ ಧರಿಸಿಕೊಳ್ಳಲೂಬೇಕಾಗುತ್ತದೆ, ಎಲ್ಲವನ್ನೂ ಅವುಡುಗಚ್ಚಿಹೋದರೆ, ತನ್ನದೆಂಬುದು ದೂರವೇ ಸರಿಯುತ್ತಲಿರುತ್ತದೆ,
ಭರವಸೆಗಳಿಲ್ಲದಿದ್ದರೂ ಮುನ್ನುಗ್ಗಿ ನಡೆಯಬಲ್ಲ ಭಂಡ ಧೈರ್ಯವೂ ಬೇಕಾಗುತ್ತದೆ, ಜೀವನವು ಒಂದಷ್ಟನ್ನು ನಡೆಯಲು ಬಿಡುತ್ತದೆ, ಇನ್ನೊಂದಿಷ್ಟನ್ನು ನಡೆಸಲು ಪಾಲಿಗಿರಿಸಿರುತ್ತದೆ,
ನಾವುಗಳ ಬರೀ ಇದ್ದೆವ ,ಮಾಡಿದೆವಾ, ಹೋದೆವಾ ಅಂತಾಗಬಾರದು, ಒಂದಷ್ಟನ್ನ ಬದಲಿಸಬೇಕು, ಒಂದಷ್ಟವರಿಗೆ ಅರಿವಾಗಬೇಕು, ಇನ್ನೊಂದಷ್ಟವರಿಗೆ ನೆರವಾಗಬೇಕು, ಯಾವುದೂ ಆಗಿಲ್ಲವೆಂದರೆ ತನ್ನ ಸಂಸಾರದೇಳಿಗೆ ನೋಡಬೇಕು ಆಗಷ್ಟೇ ಸ್ವಾಸ್ಥ್ಯ ಸಮಾಜದ ಮುನ್ನುಡಿ ಪ್ರಾರಂಭವಾಗಿರುತ್ತದೆ,
ನಾ ಬರೆದ ಮಾತ್ರಕ್ಕೆ ನನಗದರರಿವು ಅಷ್ಟಿದೆಯೆಂದಲ್ಲ , ಆದರೆ ಯೋಚನೆಗಳಿಗದರರಿವಿದೆ ಅದಕ್ಕಿಲ್ಲಿ ಪ್ರಸ್ಥಾಪಿಸಿದೆ,
ಜೀವನದ ಪ್ರತಿ ಸ್ಥರಗಳಲ್ಲಿ ಅರಿವಾಗಿಲ್ಲವಂದೆನಗೆ ಆದರೆ,ಶಾಂತ ಚಿತ್ತತೆಯಲಿ ನನ್ನನಾ ಬಳಸಿದಾಗ ಎಲ್ಲವೂ ಒಂದೊಂತರಾ ಮೆಟ್ಟಿಲುಗಳೆನಿಸಿದವು…😊
–ಗುಜಮಸ
Leave a Reply