ಮಲೆನಾಡ ಪುಣ್ಯಕ್ಷೇತ್ರ ಮೃಗಾವಧೆ (ಮಾರೀಚ ಮೃಗಾವಧೆ)

ಮೃಗವಧೆ ತೀರ್ಥಹಳ್ಳಿ ತಾಲ್ಲೂಕಿನ ಒಂದು ಪುರಾಣ ಪ್ರಸಿದ್ಧ ಸ್ಥಳ .ರಾಮಾಯಣ ಕಾಲದಲ್ಲಿ ಸೀತೆ ಮಾಯಾಜಿಂಕೆಯನ್ನು ಬಯಸುವಂತಹ ಪ್ರಸಂಗ ಈ ಸ್ಥಳದಲ್ಲಿಯೇ ನಡೆದಿದೆಯೆಂದು ಇಲ್ಲಿನ  ಸ್ಥಳಪುರಾಣ ಹೇಳುತ್ತದೆ  .ವನವಾಸದಲ್ಲಿ ರಾಮ ಸೀತೆ ಲಕ್ಷ್ಮಣ ಇಲ್ಲಿ ಕೆಲ ಕಾಲ ಇದ್ದರು ಎನ್ನುತ್ತವೆ ಇಲ್ಲಿನ ಸ್ಥಳಪುರಾಣ. .ಇಂತಹ ಸುಂದರ ಸ್ಥಳ ತೀರ್ಥಹಳ್ಳಿ  ತಾಲ್ಲೂಕಿನ ಈ ಮೃಗವಧೆ. ಇದು  ತೀರ್ಥಹಳ್ಳಿ ತಾಲೂಕಿನ ಗಡಿಯಂಚಿನ ಗ್ರಾಮವಾಗಿದೆ .ತೀರ್ಥಹಳಿ ಯಿಂದ ಸುಮಾರು ಇಪ್ಪತ್ತೈದು ಕಿಲೋಮೀಟರ್ ದೂರದಲ್ಲಿದೆ ಹಾಗೆ ಕೊಪ್ಪದಿಂದ ಸುಮಾರು ಇಪ್ಪತ್ತೆರಡು ಕಿಲೋಮೀಟರ್ ದೂರದಲ್ಲಿದೆ .

 ಇಲ್ಲಿನ ಪ್ರಾರಂಭದಲ್ಲಿ ಇರುವಂತಹ ಶನೇಶ್ವರ ಸನ್ನಿಧಿ ಇಡೀ ಮಲೆನಾಡು ಪ್ರಾಂತ್ಯಕ್ಕೆ ಹೆಸರು ಮಾಡಿದೆ .ಕಾಡು ಗುಡ್ಡ ನದಿ ಹೀಗೆ ಇಲ್ಲಿನ ಹಸಿರು ಪರಿಸರ ನೋಡುಗರ ಕಣ್ಮನ ಸೆಳೆಯುತ್ತದೆ .ಮಲ್ಲಿಕಾರ್ಜುನನ ಸನ್ನಿಧಿಯಲ್ಲಿ ನಾವು ಸಕಲ ದುಃಖಗಳನ್ನು ಮರೆಯಬಹುದಾಗಿದೆ .ವನವಾಸ ಸಂದರ್ಭದಲ್ಲಿ ಶ್ರೀ ರಾಮ ಸೀತೆಯ ಕೋರಿಕೆಯಂತೆ ಚಿನ್ನದ ಜಿಂಕೆಯನ್ನು ತಂದು ಕೊಡಲು ಬೆನ್ನಟ್ಟಿಕೊಂಡು ಹೋದ ಕಥೆ ಅನೇಕರಿಗೆ ಗೊತ್ತಿದೆ. ಜಿಂಕೆ ರೂಪದಲ್ಲಿ ಬಂದಿದ್ದ ಮಾರೀಚ ರಾಮನ ಬಾಣಕ್ಕೆ ಹತನಾಗುತ್ತಾನೆ. 
ರಾಮ ಮಾರೀಚನನ್ನು ಹತ್ಯೆ ಮಾಡಿದ ಈ ಸ್ಥಳಕ್ಕೆ ಮಾರೀಚ ಮೃಗವಧಾ ಕ್ಷೇತ್ರ ಎಂಬ ಹೆಸರು ಬಂತು ಎಂಬ ಐತಿಹ್ಯವಿದೆ. ಬ್ರಹ್ಮ ಹತ್ಯೆಯ ಕಳಂಕದಿಂದ ಪಾರಾಗಲು ರಾಮ ಮಾರೀಚನ ದೇಹದಲ್ಲಿದ್ದ ಬಾಣಲಿಂಗವನ್ನು ಅಲ್ಲಿ ಹರಿಯುತ್ತಿದ್ದ ಬ್ರಾಹ್ಮಿ ನದಿ ತೀರದ ಮೇಲೆ ಪ್ರತಿಷ್ಠಾಪಿಸಿದ ಎಂದು ಸ್ಥಳಪುರಾಣ ಹೇಳುತ್ತದೆ 

 

ಮಲಹಾನಿಕರೇಶ್ವರ ಎಂಬ ಮೂಲ ಹೆಸರಿನ ಈ ಲಿಂಗವಿರುವ ದೇವಸ್ಥಾನ ಇಂದು ಮಲ್ಲಿಕಾರ್ಜುನ ದೇವಸ್ಥಾನವೆಂದು ಪ್ರಸಿದ್ಧಿ ಪಡೆದಿದೆ. ನಾಲ್ಕೂವರೆ ಅಡಿ ಎತ್ತರದ ಬೃಹತ್ ಆಗಮ ಲಿಂಗ ಇಲ್ಲಿನ ವೈಶಿಷ್ಟ್ಯ. 
ಚಾಲುಕ್ಯರ ಕಾಲದ ಶಿಲ್ಪಕಲೆಯನ್ನು ಒಳಗೊಂಡಿರುವ ಈ ದೇವಸ್ಥಾನವನ್ನು ಚಾಲುಕ್ಯ ಅರಸ ತ್ರಿಭುವನಮಲ್ಲ 1060ರಲ್ಲಿ ನಿರ್ಮಿಸಿದನು. ಕಾಲಾನಂತರ ಅವಸಾನದ ಹಂತದಲ್ಲಿದ್ದ ದೇವಾಲಯವನ್ನು ಕೆಳದಿ ಸೋಮಶೇಖರ ನಾಯಕನ ಕಾಲದಲ್ಲಿ ಪುನರುತ್ಥಾನ ಮಾಡಲಾಯಿತು. 
ಈ ಗ್ರಾಮದ ಕೆಲವು ಭಾಗಗಳಲ್ಲಿ ಅರಮನೆ ಅಥವಾ ಅಗ್ರಹಾರಗಳಿತ್ತು ಎನ್ನುವುದಕ್ಕೆ ಕುರುಹುಗಳಿವೆ. ಹಳೆಯ ಕಾಲದ ನಿವೇಶನ, ಬಂಡೆ ಮೇಲಿನ ಅಪರೂಪದ ರೇಖಾಚಿತ್ರಗಳು, ಇಟ್ಟಿಗೆಗಳು ದೊರೆತಿದ್ದರೂ, ಸೂಕ್ತ ಸಂಶೋಧನೆ ನಡೆಯದ ಕಾರಣ ಇಲ್ಲಿನ ಇತಿಹಾಸ ಇನ್ನೂ ಬೆಳಕಿಗೆ ಬಂದಿಲ್ಲ.
ಮಲ್ಲಿಕಾರ್ಜುನ ದೇವಸ್ಥಾನದ ಸುತ್ತಲೂ ಪಂಜುರ್ಲಿ ಧೂಮಾವತಿ, ಪದ್ಮಾವತಿ, ಕ್ಷೇತ್ರಪಾಲ ಸೇರಿದಂತೆ ಈಶ್ವರನ ಸಮಸ್ತ ಗಣಗಳೂ ನೆಲೆಸಿವೆ ಎನ್ನಲಾಗಿದೆ. ಪ್ರತಿ ವರ್ಷ ಫಾಲ್ಗುಣ ಬಹುಳದಂದು ಐದು ದಿನ ಮಲ್ಲಿಕಾರ್ಜುನ ಸ್ವಾಮಿಯ ರಥೋತ್ಸವ ನಡೆಯುತ್ತದೆ.

 

ಒಂದು ಕಾಲದಲ್ಲಿ ಮಲ್ಲಿಕಾರ್ಜುನ ಸ್ವಾಮಿಯ ಪೂಜೆ ಅತಿ ವೈಭವದಿಂದ ನಡೆಯುತ್ತಿತ್ತು. ಹಲವು ವಿಶಿಷ್ಟ ಆಚರಣೆಗಳನ್ನೂ ಆಚರಿಸಲಾಗುತ್ತಿತ್ತು. ನಿತ್ಯಬಲಿ, ತ್ರಿಕಾಲ ಪೂಜೆ, ಆಗಮೋಕ್ತಿ, ಹಗಲು ದೀವಟಿಗೆ, ಕಾರ್ತಿಕ ದೀಪೋತ್ಸವ, ಅಷ್ಟಾವಧಾನ ಸೇವೆಗಳು ಇಲ್ಲಿನ ಪ್ರಮುಖ ಸೇವೆಗಳಾಗಿವೆ. 
ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಮೂರು ಸಮಯಗಳಲ್ಲಿ ಇಲ್ಲಿ ಪೂಜೆ ನಡೆಯುತ್ತದೆ. 

ಶನೀಶ್ವರ, ಶಂಕರೇಶ್ವರ, ಉಗ್ರ ನರಸಿಂಹ ಮತ್ತು ಆಂಜನೇಯ ದೇವರುಗಳ ಚಿಕ್ಕ ದೇವಾಲಯಗಳೂ ಇಲ್ಲಿವೆ. 
ಪಾರ್ವತಿ ತನ್ನ ಮೇಲಿನ ಅಪವಾದವನ್ನು ಕಳೆದುಕೊಳ್ಳಲು ಮತ್ತು ಶನಿ ದೇವನ ಪ್ರಭಾವಕ್ಕೆ ಒಳಗಾಗಿ ತನ್ನ ಲಯದ ಕಾರ್ಯವನ್ನೇ ಮರೆತು ಅಡ್ಡಾಡುತ್ತಿದ್ದ ಈಶ್ವರನಿಗೆ ಮುಕ್ತಿ ನೀಡಲು ಅಗ್ನಿಪ್ರವೇಶ ಮಾಡಲು ಮುಂದಾದ ಸ್ಥಳ ಇದು ಎಂಬ ಪ್ರತೀತಿ ಇದೆ. ಹೀಗಾಗಿ ಇಲ್ಲಿನ ಶನೀಶ್ವರ ದೇವಾಲಯ ಕೂಡ ಸಾಕಷ್ಟು ಪ್ರಸಿದ್ಧಿ ಪಡೆದಿದೆ. 
ಶ್ರಾವಣ ಮಾಸದ ಶನಿವಾರದಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. 

ಮೃಗವಧೆ ಪುಟ್ಟ ಹಳ್ಳಿಯಾದರೂ ಇಲ್ಲಿಗೆ ಆಗಮಿಸುವ ಭಕ್ತರಿಗೆ ನಿತ್ಯವೂ ಭಕ್ತರು ನೀಡುವ ದೇಣಿಗೆಯಿಂದ ಮಧ್ಯಾಹ್ನ ಅನ್ನದಾನ ನಡೆಸಲಾಗುತ್ತಿದೆ. 

(ಮಾಹಿತಿ:-ವಿವಿದ ಮೂಲಗಳಿಂದ)

.ತೀರ್ಥಹಳ್ಳಿ ತಾಲ್ಲೂಕು,ಮೃಗಾವಧೆ

ನಮ್ಮ ಶಿವಮೊಗ್ಗ : ಮಲೆನಾಡ ಹೆಬ್ಬಾಗಿಲು | Shivamogga : A Door Of Malenaadu🌿

ಶಿವಮೊಗ್ಗ ಎಂಬ ಹೆಸರು ‘ಶಿವ-ಮುಖ’ ಎಂಬ ಪದಪುಂಜದಿಂದ ಬಂದದ್ದು, ಜಲಸರಬರಾಜಿನ ಸೌಕರ್ಯವುಳ್ಳ ಶಿವಮೊಗ್ಗ ಜಿಲ್ಲೆ ಕರ್ನಾಟಕದ ಅನ್ನದ ಬಟ್ಟಲು ಎನ್ನಿಸಿಕೊಂಡಿದೆ.  ಕ್ರಿ.ಪೂ. 3ನೇ ಶತಮಾನದಲ್ಲಿ ಸಾಮ್ರಾಟ್ ಅಶೋಕನ ಮೌರ್ಯ ಸಾಮ್ರಾಜ್ಯದ ದಕ್ಷಿಣದ ತುದಿಯಾಗಿದ್ದಿತು. ಮುಂದಿನ ಶತಮಾನಗಳಲ್ಲಿ ಅನೇಕ ರಾಜಮನೆತನಗಳ ಆಳ್ವಿಕೆಯಲ್ಲಿ ಈ ಪ್ರದೇಶ ಇದ್ದಿತು: 4ನೇ ಶತಮಾನದಲ್ಲಿ ಕದಂಬರು, 6ನೇ ಶತಮಾನದಲ್ಲಿ ಚಾಲುಕ್ಯರು ಮತ್ತು ಅವರ ಸಾಮಂತರಾದ ಗಂಗರು, 8ನೇ ಶತಮಾನದಲ್ಲಿ ರಾಷ್ಟ್ರಕೂಟರು, 11ನೇಯದರಲ್ಲಿ ಹೊಯ್ಸಳರು ಮತ್ತು 15ನೇ ಶತಮಾನದಲ್ಲಿವಿಜಯನಗರದ ಅರಸರು ಈ ಪ್ರದೇಶವನ್ನು ಆಳಿದೆ ರಾಜಮನೆತನಗಳಲ್ಲಿ ಪ್ರಮುಖರು. ಶಿವಮೊಗ್ಗ ನಗರಕ್ಕೆ ಸ್ವತಂತ್ರ ವ್ಯಕ್ತಿತ್ವ ಬಂದದ್ದು 16ನೇ ಶತಮಾನದ ಕೆಳದಿ ನಾಯಕರ ಆಳ್ವಿಕೆಯಲ್ಲಿ. 17ನೇ ಶತಮಾನದ ನಂತರ ಭಾರತ ಸ್ವಾತಂತ್ರ್ಯದ ವರೆಗೂ ಶಿವಮೊಗ್ಗ ಮೈಸೂರು ಸಂಸ್ಥಾನದ ಭಾಗವಾಗಿದ್ದಿತು.

ಶಿವಮೊಗ್ಗ  ಕರ್ನಾಟಕ ರಾಜ್ಯದ ಒಂದು ನಗರ. ಶಿವಮೊಗ್ಗ ಮಹಾನಗರವು ಈ ಜಿಲ್ಲೆಯ ರಾಜಧಾನಿಯಾಗಿದೆ. ಶಿವಮೊಗ್ಗ ಜಿಲ್ಲೆ ಕರ್ನಾಟಕದ ನಿಸರ್ಗಭರಿತ ಮಲೆನಾಡಿನ ಒಂದು ಭಾಗವಾಗಿದೆ.

ಸಹ್ಯಾದ್ರಿ ಪರ್ವತಶ್ರೇಣಿ ಮತ್ತು ಅಲ್ಲಿ ಉಗಮಗೊಳ್ಳುವ ನದಿ-ಉಪನದಿಗಳು ಶಿವಮೊಗ್ಗಕ್ಕೆ ಯಥೇಚ್ಛ ನೈಸರ್ಗಿಕ ಸೌಂದರ್ಯವನ್ನು ತಂದುಕೊಟ್ಟಿವೆ. ಶಿವಮೊಗ್ಗದಿಂದ 113 ಕಿಮೀ ದೂರದಲ್ಲಿರುವ ಜಗತ್ಪ್ರಸಿದ್ಧ ಜೋಗದಜಲಪಾತ ಪ್ರಕೃತಿಯ ಒಂದು ಅಪೂರ್ವ ದೃಶ್ಯ. ಇಲ್ಲಿ ಶರಾವತಿ ನದಿ 235 ಮೀ ಎತ್ತರದಿಂದ ಸುಮನೋಹರವಾಗಿ ಧುಮುಕುತ್ತದೆ. ರಾಜ, ರಾಣಿ, ರೋರರ್ ಮತ್ತು ರಾಕೆಟ್ ಎಂಬ ನಾಲ್ಕು ವಿಭಿನ್ನ ಪ್ರವಾಹಗಳಾಗಿ ಧುಮುಕುವ ಶರಾವತಿ ಏಷ್ಯದ ಅತಿ ಎತ್ತರದ ಜಲಪಾತವನ್ನು ನಿರ್ಮಿಸಿದೆ. ಮಳೆಗಾಲದ ಸಮಯದಲ್ಲಿ ಕಾಮನ ಬಿಲ್ಲುಗಳನ್ನು ನಿರ್ಮಿಸಿಕೊಂಡು ಅತ್ಯದ್ಭುತ ದೃಶ್ಯವನ್ನು ಜಲಪಾತ ಪ್ರದರ್ಶಿಸುತ್ತದೆ.

ತುಂಗಭದ್ರಾ, ಶರಾವತಿ, ಕುಮುದ್ವತಿ ಮತ್ತು ಇತರ ನದಿಗಳಿಂದ ಜಲಸರಬರಾಜಿನ ಸೌಕರ್ಯವುಳ್ಳ ಶಿವಮೊಗ್ಗ ಜಿಲ್ಲೆ ಕರ್ನಾಟಕದ ಅನ್ನದ ಬಟ್ಟಲು ಎನ್ನಿಸಿಕೊಂಡಿದೆ.

ಶಿವಮೊಗ್ಗ ಎಂಬ ಹೆಸರು ‘ಶಿವ-ಮುಖ’ ಎಂಬ ಪದಪುಂಜದಿಂದ ಬಂದದ್ದು. ಇನ್ನೊಂದು ವ್ಯುತ್ಪತ್ತಿಯಂತೆ ಇದು ‘ಸಿಹಿ-ಮೊಗೆ’ (ಸಿಹಿಯಾದ ಮೊಗ್ಗು) ಎಂದಿದ್ದು ಅದು ‘ಶಿವಮೊಗ್ಗ’ವಾಗಿ ಮಾರ್ಪಾಟುಹೊಂದಿದೆ.ಈ ಪ್ರದೇಶವು ಕ್ರಿ.ಪೂ. 3ನೇ ಶತಮಾನದಲ್ಲಿ ಸಾಮ್ರಾಟ್ ಅಶೋಕನ ಮೌರ್ಯ ಸಾಮ್ರಾಜ್ಯದ ದಕ್ಷಿಣದ ತುದಿಯಾಗಿದ್ದಿತು. ಮುಂದಿನ ಶತಮಾನಗಳಲ್ಲಿ ಅನೇಕ ರಾಜಮನೆತನಗಳ ಆಳ್ವಿಕೆಯಲ್ಲಿ ಈ ಪ್ರದೇಶ ಇದ್ದಿತು: 4ನೇ ಶತಮಾನದಲ್ಲಿ ಕದಂಬರು, 6ನೇ ಶತಮಾನದಲ್ಲಿ ಚಾಲುಕ್ಯರು ಮತ್ತು ಅವರ ಸಾಮಂತರಾದ ಗಂಗರು, 8ನೇ ಶತಮಾನದಲ್ಲಿ ರಾಷ್ಟ್ರಕೂಟರು, 11ನೇಯದರಲ್ಲಿ ಹೊಯ್ಸಳರು ಮತ್ತು 15ನೇ ಶತಮಾನದಲ್ಲಿವಿಜಯನಗರದ ಅರಸರು ಈ ಪ್ರದೇಶವನ್ನು ಆಳಿದೆ ರಾಜಮನೆತನಗಳಲ್ಲಿ ಪ್ರಮುಖರು. ಶಿವಮೊಗ್ಗ ನಗರಕ್ಕೆ ಸ್ವತಂತ್ರ ವ್ಯಕ್ತಿತ್ವ ಬಂದದ್ದು 16ನೇ ಶತಮಾನದ ಕೆಳದಿ ನಾಯಕರ ಆಳ್ವಿಕೆಯಲ್ಲಿ. 17ನೇ ಶತಮಾನದ ನಂತರ ಭಾರತ ಸ್ವಾತಂತ್ರ್ಯದ ವರೆಗೂ ಶಿವಮೊಗ್ಗ ಮೈಸೂರು ಸಂಸ್ಥಾನದ ಭಾಗವಾಗಿದ್ದಿತು.

ಪ್ರವಾಸೀ ತಾಣಗಳು

ಜೋಗದ ಜಲಪಾತ

ಚಂದ್ರಗುತ್ತಿ “ಶ್ರೀ ರೇಣುಕಾಂಬ ದೇವಸ್ಥಾನ” ಮತ್ತು ಕೋಟೆ.

12ನೇ ಶತಮಾನದ ಲಕ್ಷ್ಮೀ ನರಸಿಂಹ ಸ್ವಾಮೀ ದೇವಸ್ಥಾನ, ಭದ್ರಾವತಿ

ಲಿಂಗನಮಕ್ಕಿ ಅಣೆಕಟ್ಟು

ವನಕೆ-ಅಬ್ಬೆ ಜಲಪಾತ

ಭದ್ರಾ ನದಿ ಯೋಜನೆ, ಲಕ್ಕವಳ್ಳಿ

ತು೦ಗಾ ನದಿ ಯೋಜನೆ,ಗಾಜನೂರು ಅಣೆಕಟ್ಟು,

ಆಗು೦ಬೆಯ ವಿಶ್ವಪ್ರಸಿದ್ದ ಸೊರ್ಯಾಸ್ತ.

ಮ೦ಡಗದ್ದೆಯ ಪಕ್ಷಿದಾಮ.

ಅ೦ಬುತೀರ್ಥ, ಶರಾವತಿಯ ಉಗಮ ಸ್ಥಾನ.

ಕು೦ದಾದ್ರಿ ಬೆಟ್ಟ.

ಕುಪ್ಪಳ್ಳಿಯ ಕವಿಶೈಲ.

ಕೋಟೆ ಶ್ರೀ ಸೀತಾರಾಮಾ೦ಜನೇಯ ಸ್ವಾಮಿ ದೇವಸ್ಥಾನ, ಶಿವಮೊಗ್ಗ.

ಕೂಡ್ಲಿ – ತುಂಗಾ ಮತ್ತು ಭದ್ರಾ ನದಿಗಳ ಸಂಗಮ ಆಗುವ ಪ್ರದೇಶ.

ಹಿಡ್ಲುಮನೆ ಜಲಪಾತ (ನಿಟ್ಟೂರು)

ಸಿರಿಮನೆ ಜಲಪಾತ

ದಬ್ಬೆ ಜಲಪಾತ

ಚೀಲನೂರು ಗ್ರಾಮದ ಜೋಗದ ಜಲಪಾತ

ಕೊಡಚಾದ್ರಿ ಬೆಟ್ಟ

ಶಿವಪ್ಪನಾಯಕನ ಕೋಟೆ (ಬಿದನೂರು ನಗರ)

ಸಿಗಂದೂರು

ತಾವರೆ ಕೊಪ್ಪದ ಸಿಂಹ ಧಾಮ

ಚೀಲನೂರು ಸೊರಬ ತಾಲ್ಲೊಕು.

ಸೊರಬ ತಾಲೂಕಿನಲ್ಲಿರುವ ಗುಡವಿ ಪಕ್ಷಿಧಾಮ (ಕರ್ನಾಟಕದ ೨ನೇ ಅತಿದೊಡ್ಡ ಪಕ್ಷಿಧಾಮ)

ಗಿರಿ-ಶಿಖರಗಳು

ಆಗುಂಬೆ, ಆಗುಂಬೆ ಸೂರ್ಯಾಸ್ತಕ್ಕೆ ಪ್ರಸಿದ್ಧ

ಕೊಡಚಾದ್ರಿ.

ಕುಂದಾದ್ರಿ ಬೆಟ್ಟ. ಜೈನ ಕ್ಷೇತ್ರ

ಬರೆಕಲ್ ಬತೆರಿ

ನಿಶಾನೆ ಗುಡ್ಡ

ಹೆದ್ದಾರಿಖಾನ್

ಮೊಳಕಾಲ್ಮುರಿ ಗುಡ್ಡ

ಜೊಗಿ ಗುಡ್ಡ

ಮುಪ್ಪಾನೆ

ನದಿಗಳು

ತುಂಗಾ

ಭದ್ರಾ

ಶರಾವತಿ

ಕುಮುದ್ವತಿ

ವೇದಾವತಿ

ವರದಾ

ಕುಶಾವತಿ

ದ೦ಡಾವತಿ

ಚರಿತ್ರೆ ಮತ್ತು ಧರ್ಮ

ಕೆಳದಿ-ಇಕ್ಕೇರಿ, ಕೆಳದಿ ನಾಯಕರ ರಾಜಧಾನಿಗಳು. ಸಾಗರ ತಾಲ್ಲೂಕು

ನಗರ, ಬಿದನೂರು ಸಂಸ್ಥಾನದ ರಾಜಧಾನಿ

ಬಳ್ಳಿಗಾವಿಯ ಕೇದಾರೇಶ್ವರ ದೇವಾಲಯ

ಶಿವಪ್ಪ ನಾಯಕನ ಅರಮನೆ

ಸೇಕ್ರೆಡ್ ಹಾರ್ಟ್ ಚರ್ಚ್, ಭಾರತದಲ್ಲಿ ಎರಡನೆ ಅತಿ ದೊಡ್ಡ ಚರ್ಚ್

ಕವಲೇದುರ್ಗದ ಕೋಟೆ, ಕೆಳದಿ ಸಂಸ್ಥಾನದ ರಾಜಧಾನಿ. ಈಗ ಕೋಟೆಯ ಪಳಯುಳಿಕೆ ಮಾತ್ರ ಇದೆ.

ತೀರ್ಥಹಳ್ಳಿ ತಾಲ್ಲೂಕಿನ ಬೆಟ್ಟಬಸರವಾನಿ ಮತ್ತು ಮರಹಳ್ಳಿ ಗ್ರಾಮಗಳಲ್ಲಿ ಜೈನ ಸಂಪ್ರದಾಯದ ಪಳಿಯುಳಿಕೆ ಇವೆ.

ಹೊಸನಗರ ತಾಲ್ಲೂಕಿನ ಹುಂಚ ಗ್ರಾಮದಲ್ಲಿ ಜೈನ ಸಂಪ್ರದಾಯದ ಮಠ ಮತ್ತು ಪದ್ಮಾವತಿ ದೇವಿಯ ದೇವಸ್ಥಾನವಿದೆ

ಹಣಗೇರೆಕಟ್ಟೆ ಹಿಂದು ಮುಸ್ಲಿಂ ಧರ್ಮಗಳ ಪವಿತ್ರ ಸ್ಥಳವಾಗಿದೆ.

ನಾಡಕಲಸಿ ಸಾಗರ ತಾಲ್ಲೂಕು ; ಪ್ರಾಚೀನ ದೇವಾಲಯ

ವನ್ಯಜೀವಿ

ತಾವರೆಕೊಪ್ಪ, ಹುಲಿ ಮತ್ತು ಸಿಂಹಧಾಮ

ಸಕ್ಕರೆಬೈಲು, ಆನೆ ತರಬೇತಿ ಶಿಬಿರ

ಮಂಡಗದ್ದೆ ಪಕ್ಷಿಧಾಮ, ಕುಕ್ಕನ ಗುಡ್ಡಾ, ಗುಡವಿ

ಸೊರಬ ತಾಲೂಕೀನ ಚೀಲನೂರು ಕಾಡು ನವಿಲುಗಳಿಗೆ ವಾಸಸ್ಥಾನವಾಗಿದೆ.

ಐತಿಹಾಸಿಕ ವ್ಯಕ್ತಿಗಳು

ಕೆಳದಿಯ ಚೆನ್ನಮ್ಮಾಜಿ

ಅಲ್ಲಮಪ್ರಭು ದೇವರು

ಕೆಳದಿ ಶಿವಪ್ಪ ನಾಯಕ

ಅಕ್ಕಮಹಾದೇವಿ, [ ಉಡುತಡಿ ,ಶಿಕಾರಿಪುರ ತಾಲ್ಲೂಕು,ಶಿವಮೊಗ್ಗ ಜಿಲ್ಲೆ]

ರಾಜಕೀಯ ವ್ಯಕ್ತಿಗಳು

         ಕಡಿದಾಳ್ ಮಂಜಪ್ಪ, ಮಾಜಿ ಮುಖ್ಯಮಂತ್ರಿಗಳು

ಶಾಂತವೇರಿ ಗೋಪಾಲಗೌಡ, ಸಮಾಜವಾದಿ ನಾಯಕರು

ದಿ.ಎ.ಆರ್. ಬದರಿನಾರಾಯಣ್- ಮಾಜಿ ಮಂತ್ರಿಗಳು

ದಿ.ಶೀರ್ನಾಳಿ ಚಂದ್ರಶೇಕರ್ -ಮಾಜಿ ಶಾಸಕರು ಹೊಸನಗರ

ದಿ. ರತ್ನಮ್ಮ ಮಾಧವ್ ರಾವ್ – ಮಾಜಿ ಶಾಸಕರು ಶಿವಮೊಗ್ಗ (ಮ್ಯಸೂರು ರಾಜ್ಯ)

ಎಸ್. ಬಂಗಾರಪ್ಪ, ಕರ್ನಾಟಕದ ಮಾಜಿ ಮುಖ್ಯಮಂತ್ರಿ

ಬಿ ಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳು,ಮಾಜಿ ಪ್ರತಿಪಕ್ಷ ನಾಯಕರು ಶಾಸಕರು.

ಕೆ ಎಸ್ ಈಶ್ವರಪ್ಪ,ಮಾಜಿ ಉಪಮಂತ್ರಿಗಳು,ಮಾಜಿ ಪ್ರತಿಪಕ್ಷ ನಾಯಕರು,

ಹೆಚ್.ಹಾಲಪ್ಪ ,ಮಾಜಿ ಮಂತ್ರಿಗಳು, ಸೊರಬದ ಶಾಸಕರು.

ಆರಗ ಜ್ನಾನೇ೦ದ್ರ,ಮಾಜಿ ಶಾಸಕರು.

ಕಾಗೋಡು ತಿಮ್ಮಪ್ಪ, ಮಾಜಿ ಮಂತ್ರಿಗಳು ಶಾಸಕರು. ಪ್ರಸ್ಥುತ ವಿಧಾನ ಸಭಾ ಅಧ್ಯಕ್ಷರು (31-5-2013)

ಎಲ್.ಟಿ.ತಿಮ್ಮಪ್ಪ ಹೆಗಡೆ ಮಾಜಿ ಶಾಸಕರು ಲಿಂಗದಹಳ್ಳಿ.

ಕೆ.ಜೆ.ಕುಮಾರ ಸ್ವಾಮಿ,ಶಿವಮೊಗ್ಗ ಗ್ರಾಮಾಂತರ ಮಾಜಿ ಶಾಸಕರು.

ಕಿಮ್ಮನೆ ರತ್ನಾಕರ್, ಶಿಕ್ಷ್ನ ಣ ಸಚಿವರು.

ಪ್ರಸನ್ನ ಕುಮಾರ್ -ಶಾಸಕರು ಶಿವಮೊಗ್ಗ

ಮಧು ಬಂಗಾರಪ್ಪ -ಶಾಸಕರು-ಸೊರಬ

ಶಾರದಾ ಪೂರ್ಯಾನಾಯಕ್ -ಶಿವಮೊಗ್ಗ ಗ್ರಾಮಾಂತರ ಶಾಸಕರು

ಅಪ್ಪಾಜಿ ಗೌಡ -ಶಾಸಕರು -ಭದ್ರಾವತಿ

ಪ್ರಮುಖ ವ್ಯಕ್ತಿಗಳು

ರಾಷ್ಟ್ರಕವಿ ಕುವೆಂಪು, ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿ ಮತ್ತು ಲೇಖಕ.

ಡಾ.ಎಸ್.ಆರ್. ರಾವ್ (ಶಿಕಾರಿಪುರ ರಂಗನಾಥ ರಾವ್) ಭಾರತದ ಹೆಸರಾಂತ ಪ್ರಾಚ್ಯ ವಸ್ತು ತಜ್ಞ

ಯು ಆರ್ ಅನಂತಮೂರ್ತಿ, ಕನ್ನಡ ಲೇಖಕರು ಹಾಗು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು

ಪಿ.ಲಂಕೇಶ್, ಲೇಖಕ-ಪತ್ರಕರ್ತರು

ನಾ. ಡಿಸೋಜ, ಸಾಹಿತಿ

ಎಮ್.ಕೆ. ಇ೦ದಿರ, ಕಾದ೦ಬರಿಕಾರ್ತಿ

ಕೆ.ವಿ.ಸುಬ್ಬಣ್ಣ, ಸಾಹಿತಿ ಮತ್ತು ನಾಟಕಕಾರ

ಜಿ. ಎಸ್. ಶಿವರುದ್ರಪ್ಪ, ಕರ್ನಾಟಕದ ರಾಷ್ಟ್ರಕವಿ

ಎನ್ ಎಸ್ ಲಕ್ಷ್ಮಿನಾರಾಯಣ ಭಟ್ಟ, ಪ್ರಸಿದ್ದ ಕವಿ

ಗಿರೀಶ್ ಕಾಸರವಳ್ಳಿ, ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ

ಡಾ.ಟಿ.ಎಂ.ಶಿವಾನಂದಯ್ಯ ಹಿರಿಯ ಆಯುರ್ವೇದ ವೈದ್ಯರು

ಹೊ.ಅ.ನರಸಿಂಹ ಮೂರ್ತಿ ಅಯ್ಯಂಗಾರ್,ಮಾಜಿ-ರಾಜ್ಯ ರ್ಕಾರ್ಯದರ್ಶಿಗಳು,ವಿಶ್ವ ಹಿಂದೂ ಪರಿಷತ್.

ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್, ಖ್ಯಾತ ಚಲನಚಿತ್ರ ನಟ

ಪ್ರಮುಖ ಆಕರ್ಷಣೆಗಳು 
ಕುವೆಂಪು ವಿಶ್ವವಿದ್ಯಾನಿಲಯ
ಕುವೆಂಪು ವಿಶ್ವವಿದ್ಯಾನಿಲಯವು ಶಿವಮೊಗ್ಗದಿ೦ದ 27 ಕಿ.ಮಿ, ಶಿವಮೊಗ್ಗದಿಂದ ಭದ್ರಾ ಅಣೆಕಟ್ಟೈಗೆ (ಬಿ.ಆರ್.ಪಿ) ಗೆ ಹೋಗುವ ಮಾರ್ಗದಲ್ಲಿ ಶಂಕರ ಘಟ್ಟ ದಲ್ಲಿದೆ. ಅತ್ಯುತ್ತಮ ವಿದ್ಯಾ ಕೇಂದ್ರವಾಗಿ ಹೆಸರಾಗಿದೆ. ಶಿವಮೊಗ್ಗ ಜಿಲ್ಲೆಯ ಅತ್ಯಂತ ಪ್ರಸಿಧ್ಹ ಸಾಹಿತಿ ಕೆ ವಿ ಪುಟ್ಟಪ್ಪ (ಕುವೆಂಪು) ರವರ ಸ್ಮರಣಾರ್ಥ್ಹ ವಾಗಿ ಈ ವಿಶ್ವ ವಿದ್ಯಾನಿಲಯಕ್ಕೆ ಅವರ ಹೆಸರನ್ನು ಇಡಲಾಗಿದೆ.

ವಿಮಾನ ನಿಲ್ದಾಣ
ಶಿವಮೊಗ್ಗ ವಿಮಾನ ನಿಲ್ದಾಣ (ನಿದಿಗೆ ಸಮೀಪ),ಶಿವಮೊಗ್ಗ ನಗರದಿಂದ 12 ಕಿ ಮೀ ಗಳು ಮಾತ್ರ. ಆದರೆ ಇದರ ಕಾರ್ಯ ಮಂದಗತಿಯಲ್ಲಿ ಸಾಗಿದೆ ಹಾಗೂ ಪೂರ್ಣಗೊಳ್ಳುವುದೋ ಇಲ್ಲವೋ ಎಂಬ ಅನುಮಾನ ಜನರನ್ನು ಕಾಡುತ್ತಿತ್ತು. ಆದರೆ ಈಗ ಕಾರ್ಯಪ್ರಗತಿ ಅತ್ಯಂತ ವೇಗವಾಗಿದ್ದು, ಈಗಾಗಲೇ 2 ಕಿಮಿ ವೇಗದ ರನ್ ವೇ ಕಾರ್ಯ ಸಂಪೂರ್ಣಗೊಂಡಿದ್ದು, ಮೇ – ಜೂನ್ 2018 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ…..

ವಿಭಿನ್ನ ಮಾನವರು ಹಾಗೂ ಮಾನವೀಯತೆಯ ಮುಖಗಳು

ಒಂದೊಂದು ಸಲ ಹೀಗನ್ನನಿಸುವುದು ಸಹಜ,

ಪೀಠಿಕೆಯ ಪರಿಪಾಟಲು

ಮಾನವೀಯತೆಯಿಲ್ಲದ ಜನಗಳು , ಕಟುಕರೇ ನಿಜವಾಗಿಯೂ ಅವರುಗಳು ಅಂತೆಲ್ಲಾ, ಬೇಸರಿಸುವುದಿದೆ, ಆದರೆ ಅದರಿಂದ  ಯಾವ ಬದಲಾವಣೆಗಳಾಗೋದು  ಹೋಗಲಿ, ನಾನೂ ಸಹ ಬದಲಾಗಲಿಲ್ಲ,

ಹೀಗೊಂದು ನನ್ನನುಭವದಲಿ ,

ದಿನ ಗೋಧೂಳಿ ಸಮಯ, ನಾನೂ ಹಾಗೂ ನನ್ನ ಸಹೋದ್ಯೋಗಿ ಆ್ಯಲನ್ ರ ಜೊತೆಗೂಡಿ ಮನೆ ಹಾದಿ ಹಿಡಿದು ನಡೆಯುತ್ತಿದ್ದೆವು, 

ಪರಿಚಯವಿಲ್ಲದ ದೇಶವಾದ್ದರಿಂದ ಏನೋ ಒಂದು ತೆರನಾದ ಭಯ ಆತಂಕಗಳ ಹೆಜ್ಜೆ ನಮ್ಮವು ಪ್ರತಿದಿನ, 

ಯಾರೋ ಹಿಂದಿನಿಂದ ಬರುವ ನೆರಳಛಾಯೆ ಕಂಡರೂ ಕಮರೋ ಧೈರ್ಯ,

ಇಂತೆಯೆ ನಡೆದುಸಾಗಬೇಕಾದರೆ , ಸ್ವಾಮಿನಾರಾಯಣ ಪ್ರಮುಖ ರಸ್ತೆಯಲ್ಲಿ ಸಾಗಬೇಕಾದರೆ 

ಓರ್ವ ಅರೆಬರೆ ಬಟ್ಟೆಯ ತೊಟ್ಟ ಕೊಳಕಲು ಸಮವಯಸ್ಕನೊಬ್ಬ ರಸ್ತೆಯ ಆ ಬದಿಯಿಂದ ಬಂದವನೇ ನನ್ನ ಅಂಗಿಯ ಹಿಡಿದೆಳೆದು ‘ಕಾಕ ಚಾಕೂಲ  ಹಮ್ನ , ನೀಪೆ ಪೇಸ’ ಎಂದು ಗೋಗರೆಯತೊಡಗಿದ, ನನಗೊಂದು ಬದಿ ಮುಜುಗರ ಹಾಗೇ ಹೇಳಲು ಮಾತೇ ಹೊರಡದೆ, ತೊದಲುತ್ತ ನಿಂತೆ, ಎಷ್ಟು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಹಿಡಿದೆಳೆಯತೊಡಗಿದ, ಅಲ್ಲೆ ಓಡಾಡುತ್ತಿದ್ದ ಗುಜರಾತಿಗಳೋ ಮುಗುಳುನಗೆ ಬೀರುತ್ತಾ ಸಾಗುತ್ತಿದ್ದಾರೆ, 

ನನ್ನ ಅಸಹಾಯಕತೆ ಯಾರಿಗೆ ಹೇಳಲಿ ಅಂತಾನೆ ಅರ್ಥವಾಗದೆ ನಿಂತೆ, ಎಲ್ಲಿ ಕಿಸೆಗೆ ಕೈಹಾಕಿ ದುಡ್ಡು ಕೊಡಬೇಕಾದರೆ , ಉಳಿದಿದ್ದನ್ನೂ ಕಿತ್ತುಕೊಂಡರೆ ಏನು ಗತಿ ದೇವರೇ ಎಂದು ಸುತ್ತಲೂ ನೋಡತೊಡಗಿದೆ, 

ನಮ್ಮವರ್ಯಾರೂ ಅತ್ತ ಬರಲಿಲ್ಲ, ಆದರೆ ಇದ್ದಕ್ಕಿದ್ದಂತೆ ರಸ್ತೆಯ ಆ ಮಗ್ಗುಲಿನ ಸೈಕಲ್ಲಿನ ಹಣ್ಣು ವ್ಯಾಪಾರಿ ಇದ ಕಂಡಿದ್ದನೆನಿಸುತ್ತದೆ ,

ಇತ್ತ ಬಂದವನೇ ಆ ಬುದ್ಧಿಹೀನ  ಹುಡುಗನಿಗೆ ಎಳೆದು ಹಿಡಿದು ಕಪಾಳಕ್ಕೆ ಬಾರಿಸತೊಡಗಿದನು, ಆತ ಅಳತೊಡಗಿದನು, ‘ಸ್ವಹಿಲಿ’ ಭಾಷೆಯಲ್ಲದೇನೇನೋ ಬೈಯ್ಯುತ್ತಾ ಎಳೆದುಕೊಂಡು ಹೋಗುತ್ತಲೆ, ‘ವೇವೆ ಸಸೈವಿ ನೇಂಡ ‘ ಎಂದು ಹೇಳಿ ಆತನ ಕರೆದುಕೊಂಡು ಹೋದನು, 

ನಾನು ಉಳ್ಳದಿಂದ ತಪ್ಪಿಸಿಕೊಂಡ  ಕಾಡುಹಂದಿಯಂತೆ, ಒಂದೇ ಉಸಿರಲ್ಲಿ ನಡೆದೆನು ಹಿಂತಿರುಗುತ್ತಾ ಹಿಂತಿರುಗುತ್ತಾ,

ಆತ ಅದೆಲ್ಲೊ ಕಣ್ಣೊರೆಸುತ್ತಾ ಇನ್ನಾವುದೋ ಅಡ್ಡ ರಸ್ತೆಗೆ ನಡೆದನು,

ನಾನೋ  ಬದುಕಿದೆನಪ್ಪ ಅಂತ ಆ ಹಣ್ಣು ವ್ಯಾಪಾರಿಗೆ ಮನಸಾರೆ ವಂದಿಸುತ್ತಾ ನಡೆಯಬೇಕಾದರೆ, ಸ್ವಲ್ಪ ದೂರದಲ್ಲಿ ನನ್ನ ಆಂತರ್ಯವೇಕೋ, ಎವೆಯಿಕ್ಕದೆ ಆತನ ಕಣ್ಣಾಲಿಗಳ ಕಂಬನಿಯನ್ನೆ ನೆನೆಸುತ್ತಲಿತ್ತು,

ಹಾಗೆ ಒಮ್ಮೆ ನನ್ನ ಬಲಭುಜವನ್ನೊಮ್ಮೆ ದಿಟ್ಟಿಸಿದೆ, ಆತ ನನ್ನ ಹಿಡಿದೆಳೆದ , ಬೆರಳಚ್ಚು ಕಪ್ಪಗೆ ಹಿಡಿದಿತ್ತು, ಈಗ ನನಗೆ ಇನ್ನಷ್ಟು ದಿಗಿಲಾಗತೊಡಗಿತು, ಛೇ ನಾ ತಪ್ಪು ಮಾಡಿದೆ, ದುಡ್ಡು ಕೊಡಬೇಕಿತ್ತು, ಸುಖಾಸುಮ್ಮನೆ ಆತ ಹೊಡೆತ ತಿಂದನಲ್ಲವೆಂಬ ತಪ್ಪಿನ ತಗಾದೆಯ ಮನವೆತ್ತಾಡತೊಡಗಿತು ,

ಇದಾಗಿದ್ದಲ್ಲವೆಂದು ಸುಮಾರು ದೂರ ಹೋಗಿ ಗಪ್ಪನೆ ನಿಂತೆ , ಸಹೋದ್ಯೋಗಿ ಆ್ಯಲನ್ ನನ್ನ ಮುಖವನ್ನೆ ದಿಟ್ಟಿಸಿ ‘ವ್ಹಾಟ್ ಹಾಪೆಂಡ್,ಫಾರ್ಗೊಟನ್ ಸಮ್ತಿಂಗ್ ‘ ಎಂದರು, ಈಗ ನಾನು ಏನೂ ಹೇಳುವ ಸ್ಥಿತಿಯಲ್ಲಿರಲಿಲ್ಲ, 

ಕೈಯ್ಯಲ್ಲಿದ್ದ ಚೀಲವನ್ನು ಅವರ ಕೈಯ್ಯಲ್ಲಿತ್ತು, ‘ವೆಯ್ಟ್ ಹಿಯರ್ ಫ್ಯೂ ಮಿನ್ಯುಟ್ಸ್’ ಅಂದವನೆ,

ಆ ಯುವಕನ ಹುಡುಕಲಾರಂಭಿಸಿದೆ ,ನಡೆದ ದಾರಿಯಲ್ಲೆ ಹಿನ್ನಡೆದು ಅಡ್ಡ ದಾರಿಯ ತಲುಪಿದೆ , ಸುಮಾರು ದೂರದಲ್ಲಿ ಇನ್ಯಾರನೋ ಅಂಗಲಾಚುತಿದ್ದ, ಆ ದೆಸೆಗೆ ನಡೆದೆ ಬಿರುಸಿನಲಿ, 

ಕೊನೆಗು ಆತನ ಮುನ್ನಿಂತೆ  ಕೋಪವೋ,ಅನುಕಂಪವೋ ಏನೆಂದು ತಿಳಿಯದ ಭಾವವೊಂದಿತ್ತು ನನ್ನಲ್ಲಿ, ಕಣ್ಣಗಲಿಸಿ , ಎದುರು ಕಿಸೆಯಿಂದ ಆತನಿಗೆಂದು ತೆಗೆದಿರಿಸಿದ ಸಾವಿರ ಶಿಲ್ಲಿಂಗಿನ ಒಂದು ನೋಟನ್ನು ಆತನ ಕೈಗಿರಿಸಿ ‘ ಶೀಕ ಬಡಾಯಿ ಹಮ್ನ ‘ಎಂದ್ಹೇಳಿ ಹಿಂದಿರುಗಿ ನಡೆದ ನಾನು ಹಿಂತಿರುಗಲೇ ಇಲ್ಲ, ಯಾಕೋ ಒಂದು ಆತ್ಮತೃಪ್ತಿ ಮೂಡಿತ್ತು, ಅಬ್ಬ ಎಂದು ನಿಟ್ಟುಸಿರಲ್ಲಿ ನಡೆದೆ, ಆ್ಯಲನ್ ರವರು ನನ್ನ ಮುಖನೋಡಿ, ಏನೋ ತಿಳಿದಂತೆ ಮುಗುಳ್ನಗೆ ಬೀರಿದರು…

Blog at WordPress.com.

Up ↑